

ಹೊಸಪೇಟೆ: ತಾಲೂಕಿನ ಆರೋಗ್ಯ ಇಲಾಖೆ ವಿವಿಧ ವೃಂದದ ಗುತ್ತಿಗೆ ನೌಕರರು, ಆರ್.ಬಿ.ಎಸ್.ಕೆ. ಡಾಕ್ಟರ್ ಸ್ಟಾಪ್‌ನರ್ಸ್, ಆರೋಗ್ಯ ಸಹಾಯಕರು, ಲ್ಯಾಬ್ ತಂತ್ರಜ್ಞರು, ಾರ್ಮಸಿಸ್ಟ್‌ಗಳು, ಲಿಪಿಕ ನೌಕರರು, ಡಿ.ಗ್ರೂಪ್ ನೌಕರರು, ವಾಹನ ಚಾಲಕರು ಗುತ್ತಿಗೆ ಹಾಗೂ ಹೊರಗುತ್ತಿಗೆ ನಿಷೇಧ, ಹುದ್ದೆಯಲ್ಲಿ ಕಾಯಂಗೊಳಿಸಬೇಕೆಂದು ಆಗ್ರಹಿಸಿ ತಾಲೂಕು ಕಚೇರಿ ಎದುರು ಗುತ್ತಿಗೆ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.
ಡಾ.ಪ್ರವೀಣ್ ಮಾತನಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕೆಂದು ಹಲವು ಭಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕರೊನಾ ಸಂದರ್ಭದಲ್ಲಿ ಗುತ್ತಿಗೆ ನೌಕರರು ಎದೆಗುಂದದೆ ಸೇವೆಯಲ್ಲಿ ತೊಡಗಿದ್ದಾರೆ. ಆರೋಗ್ಯ ಇಲಾಖೆ ಅನೇಕರಿಗೆ ಕನಿಷ್ಠ ಪ್ರೋತ್ಸಾಹಧನವೂ ನೀಡದೆ ತಾರತಮ್ಯವೆಸಗಿದೆ. ಸರ್ಕಾರ ಕೂಡಲೇ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಎಚ್.ವಿಶ್ವನಾಥಗೆ ಮನವಿ ಸಲ್ಲಿಸಿದರು. ಮುಖಂಡರಾದ ಡಾ.ನಾಗರತ್ನಾ, ಡಾ.ದೀಲಿಪ, ರೂಪಾ, ಅನಿತಾ, ಮಂಜುನಾಥ, ಕಿರಣ, ಜಗದೀಶ್, ರಾಧಾ, ರಾಧಿಕ ಮತ್ತಿತರರಿದ್ದರು. ಬಳ್ಳಾರಿ ಜಿಲ್ಲಾ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಅಧ್ಯಕ್ಷ ಎಂ.ಧರ್ಮನಗೌಡ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.