ಶಾಶ್ವತ ಕಾಲುಸಂಕ ನಿರ್ಮಾಣ

Mul_Bridge
Published on

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಅತಿಕಾರಿಬೆಟ್ಟು-ಬಳ್ಕುಂಜೆ ಗ್ರಾಮ ವ್ಯಾಪ್ತಿಯ ನಡಿಬೆಟ್ಟು ಬಳಿ ಕೃಷಿ, ಹೈನುಗಾರಿಕೆಗೆ ಪೂರಕವಾಗಿ ಕಳೆದ ಹಲವಾರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಕಾಲು ಸಂಕ ಕುಸಿದು ಹೋಗಿದ್ದು ಜನರು ತಾತ್ಕಾಲಿಕ ಸಂಕದಲ್ಲಿಯೇ ಹೋಗಬೇಕಾಗಿದ್ದು ಪೂರ್ಣ ಪ್ರಮಾಣದ ಕಾಲುಸಂಕ ನಿರ್ಮಾಣ ಮಾಡಬೇಕು ಎಂದು ನಿವೃತ್ತ ಸೈನಿಕ, ಕೃಷಿಕ ಶಶಿಧರ್ ಶೆಟ್ಟಿ ತಿಮಿರುಗುತ್ತು ಸ್ಥಳೀಯ ಆಡಳಿತವನ್ನು ಆಗ್ರಹಿಸಿದ್ದಾರೆ.

ಬಳ್ಕುಂಜೆ ಗ್ರಾಪಂ ಸಂಪರ್ಕದ ನಡಿಬೆಟ್ಟು ಬಳಿ ಬೃಹತ್ ಕೃಷಿ ಚಟುವಟಿಕೆಗಳು, ಶಾಲಾ ಮಕ್ಕಳು, ಹೈನುಗಾರಿಕೆ ಮಾಡುವವರು ಕಾಲು ಸಂಕವನ್ನು ಅವಲಂಬಿಸಿದ್ದಾರೆ.

ವಯೋವೃದ್ಧರು ತಾತ್ಕಾಲಿಕ ಸಂಕದಲ್ಲಿ ಹೋಗುವಾರ ಎದುರಿಸುವ ಸಮಸ್ಯೆಗಳ ಬಗ್ಗೆ ಅತಿಕಾರಿಬೆಟ್ಟು ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಕೃಷಿಕ ಹಾಗೂ ನಿವೃತ್ತ ಸೈನಿಕ ಶಶಿಧರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಎಕರೆಗಟ್ಟಲೆ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು, ಸ್ಥಳೀಯ ನಾಗರಿಕರು ನಡೆದುಕೊಂಡು ಹೋಗಲು ಕಾಲು ಸಂಕವನ್ನು ಅವಲಂಬಿಸಿದ್ದಾರೆ.

ಸ್ಥಳೀಯ ದಾನಿಗಳ ಮುಖಾಂತರ ತಾತ್ಕಾಲಿಕ ನೆಲೆಯಲ್ಲಿ ಕಾಲುಸಂಕ ನಿರ್ಮಾಣ ಮಾಡಲಾಗಿದ್ದು, ಪೂರ್ಣ ಪ್ರಮಾಣದ ಕಾಂಕ್ರೀಟ್ ಕಾಲುಸಂಕ ಅಗತ್ಯವಿದೆ. ಈ ಬಗ್ಗೆ ಜನ ಪ್ರತಿನಿಧಿಗಳು, ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಯಾವುದೇ ಕೃಷಿ ಚಟುವಟಿಕೆ ಸಾಗಾಟ, ಸಣ್ಣ ಮಕ್ಕಳು ಶಾಲೆಗೆ ಹೋಗುವ ಸಂದರ್ಭ ತಾತ್ಕಾಲಿಕ ಸಂಕ ಅಪಾಯಕಾರಿಯಾಗಿದೆ ವಯೋವೃದ್ಧರು ಈ ಸಂಕದಲ್ಲಿ ದಾಟುವುದು ಕೂಡ ಬಹು ತ್ರಾಸದಾಯಕ. - ಶಶಿಧರ್ ಶೆಟ್ಟಿ, ನಿವೃತ್ತ ಸೈನಿಕ ಕಾಲುಸಂಕ ಇರುವ ಪ್ರದೇಶವು ಬಳ್ಕುಂಜೆ ಗ್ರಾಮ ವ್ಯಾಪ್ತಿಯಲ್ಲಿ ಬರುವ ಕಾರಣ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿಯಿಂದ ಕಾಮಗಾರಿ ಸಾಧ್ಯವಿಲ್ಲ. - ಮನೋಹರ ಕೋಟ್ಯಾನ್, ಉಪಾಧ್ಯಕ್ಷರು ಅತಿಕಾರಿಬೆಟ್ಟು ಪಂಚಾಯಿತಿ https://www.vijayavani.net/the-achievement-of-rural-children-is-excellent https://www.vijayavani.net/a-good-lawyer-by-study

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net