ಪೆರಿಯ ಕ್ಯಾಂಪಸ್‌ನಲ್ಲಿ ವಿವಿಧ ಕಾರ್ಯಕ್ರಮ

New Project (43)
Published on

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‌ನ ಯೋಗ ಅಧ್ಯಯನ ವಿಭಾಗ ಆಶ್ರಯದಲ್ಲಿ ಯೋಗ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕುಲಪತಿ ಪ್ರೊ.ಸಿದ್ದು ಪಿ. ಅಲಗೂರ್ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ವಿವಿ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಮಾಜಿ ಅಧ್ಯಕ್ಷ ಪ್ರೊ.ಕೆ.ಕೃಷ್ಣ ಶರ್ಮ ಯೋಗ ದಿನದ ಸಂದೇಶ ನೀಡಿದರು.

ರಿಜಿಸ್ಟ್ರಾರ್ ಡಾ.ಎಂ.ಮುರಳೀಧರನ್ ನಂಬಿಯಾರ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ.ರಾಜೇಂದ್ರ ಪಿಲಾಂಗಟ್ಟೆ, ಸ್ಕೂಲ್ ಆಫ್ ಮೆಡಿಸಿನ್ ಮತ್ತು ಪಬ್ಲಿಕ್ ಹೆಲ್ತ್ ಡೀನ್ ಪ್ರೊ.ಮ್ಯಾಥ್ಯೂ ಜಾರ್ಜ್ ಉಪಸ್ಥಿತರಿದ್ದರು. ಡಾ.ಸುಬ್ರಹ್ಮಣ್ಯ ಪೈಲೂರು ಸ್ವಾಗತಿಸಿದರು. ಡಾ.ಅಂಜಲಾ ದೇವಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net