

ಗಜೇಂದ್ರಗಡ: ಬದುಕಿಗೆ ಕಣ್ಣುಗಳು ತುಂಬಾ ಅವಶ್ಯಕವಾಗಿದ್ದು, ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಗಜೇಂದ್ರಗಡ ರೋಟರಿ ಸಂಸ್ಥೆಯ ಅಧ್ಯಕ್ಷ ಸುರೇಶ ರಂಗ್ರೇಜಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ರೋಟರಿ ಸಂಸ್ಥೆ ಗಜೇಂದ್ರಗಡ ವತಿಯಿಂದ ಹುಬ್ಬಳ್ಳಿಯ ಎಂ.ಎಂ.ಜೋಶಿ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಗಜೇಂದ್ರಗಡ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆ ಆಪರೇಶನ್ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊರ ಜಗತ್ತನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಕಾಪಾಡಿಕೊಳ್ಳುಬೇಕು ಎಂದರು.
ವಕೀಲ ಆರ್.ಎಂ.ರಾಯಬಾಗಿ ಮಾತನಾಡಿದರು. ಶಿಬಿರದಲ್ಲಿ 400 ಜನರನ್ನು ತಪಾಸಣೆ ಮಾಡಿ 99 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ರೊಟರಿ ಸಂಸ್ಥೆಯ ಕಾರ್ಯದರ್ಶಿ ಗಿರೀಶ ವೆರ್ಣೇಕರ, ಲಕ್ಷ್ಮಣ ರಂಗ್ರೇಜಿ, ಗೋವಿಂದ ಮಂತ್ರಿ, ಗಣೇಶ ರಾಯಬಾಗಿ, ಬಾಬು ನಾವಡೆ, ರೀತು ಮೆಹರವಾಡೆ, ಮಂಜುನಾಥ ಯರಗೇರಿ, ವಿಶಾಲ ಕಡ್ಡಿ, ಗುರು ಕೆಂಚಿ, ರಮೇಶ ಮರಾಠಿ, ಎಸ್.ತೊಂಡಿಹಾಳ ಇತರರು ಇದ್ದರು.