ವಿದೇಶಿ ಪ್ರೀತಿಯಿಂದ ದೇಶಕ್ಕೆ ಗಂಡಾಂತರ

Asmakam Sanskrit Pathashala
Published on

ಹಿರೇಕೆರೂರ: ಭಾರತೀಯ ಭಾಷೆ ಸಂಸ್ಕೃತವನ್ನು ನಮ್ಮವರು ಅಧ್ಯಯನ ಮಾಡುತ್ತಿಲ್ಲ. ವಿದೇಶಿ ಭಾಷೆಯ ಬೇರೆ ಬೇರೆ ಶಾಸ್ತ್ರಗಳನ್ನು ಕಲಿತು, ಉದ್ಯೋಗಕ್ಕಾಗಿ ಅಲ್ಲಿಗೆ ಹೋಗಿ ನೆಲೆಸುತ್ತಿದ್ದಾರೆ. ಇದರಿಂದ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ಸಂಸ್ಕೃತ ಪಾಠಶಾಲೆ ಅಧ್ಯಕ್ಷ, ಮೂಡಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಶಿವಾನುಭವ ತತ್ವ ಪ್ರಚಾರ ಸಮಿತಿಯ ಸಂಸ್ಕೃತ ಪಾಠಶಾಲೆ, ಮದ್ವೀರಶೈವ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಮತ್ತು ಅಕ್ಕನ ಬಳಗದ ವತಿಯಿಂದ ಏರ್ಪಡಿಸಿದ್ದ ಸಂಸ್ಕೃತೋತ್ಸವ ಸರಣಿ (ಅಸ್ಮಾಕಮ್ ಸಂಸ್ಕೃತಮ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಿಂದ ಉದ್ಯೋಗ ಅರಸಿಕೊಂಡು ವಿದೇಶಿಗಳಿಗೆ ಹೋಗಿ ನೆಲೆಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಪಾಲಕರು ವೃದ್ಧಾಪ್ಯ ಜೀವನದಲ್ಲಿ ತೊಂದರೆ ಅನುಭವಿಸುವಂತಾಗಿದೆ. ಮಕ್ಕಳಲ್ಲಿ ಸಂಸ್ಕಾರಯುತ ಗುಣಗಳು ಮರೀಚಿಕೆಯಾಗುತ್ತಿವೆ. ಇಂತಹ ವೇದಿಕೆಗೆ ಮಕ್ಕಳನ್ನು ಹೆಚ್ಚು ಕರೆತಂದು ಇಲ್ಲಿನ ವಿಚಾರ, ಸಂಗತಿಗಳನ್ನು ತಿಳಿಹೇಳಬೇಕು ಎಂದರು.

ಜಿಲ್ಲಾ ಸಾಮಾನ್ಯ ಶಿಕ್ಷಣದ ವಿದ್ಯಾಲಯದ ಸಂಸ್ಕೃತ ಶಿಕ್ಷಣ ಯೋಜನೆ ಸಂಯೋಜಕಿ ರತ್ನಾ ಮಡ್ಲೇರಿ ಮಾತನಾಡಿ, ಸಂಸ್ಕೃತ ಭಾಷೆ ಅತ್ಯಂತ ಪ್ರಾಚೀನ ಪುರಾತನವಾದ ಭಾಷೆಯಾಗಿದ್ದು, ಬಹಳ ಸರಳವಾದ ಭಾಷೆಯಾಗಿದೆ. ಕೇವಲ 10 ದಿನಗಳಲ್ಲಿ ಕಲಿತು ಮಾತನಾಡಬಹುದಾಗಿದೆ ಎಂದರು.

ವಿವೇಕ ಜಾಗ್ರತ ಬಳಗದ ಪಾಠಶ್ರೀಯಾದ ಸುಮಾ ಬೆಟ್ಟಳ್ಳೇರ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ ಮಾತನಾಡಿದರು. ಸಂಸ್ಕೃತ ಪಾಠಶಾಲೆಯ ಕಾರ್ಯದರ್ಶಿ ಗುರುಶಾಂತ ಯತ್ತಿನಹಳ್ಳಿ ಅವರು ಶಾಲೆ ನಡೆದು ಬಂದ ಮಾಹಿತಿ ತಿಳಿಸಿದರು. ವಿವೇಕ ಜಾಗ್ರತ ಬಳಗದವರು ರಾಮರಕ್ಷಾ ಸ್ತೋತ್ರ ಪಠಿಸಿದರು.

ಮದ್ವೀರಶೈವ ಸಮಾಜದ ಅಧ್ಯಕ್ಷ ವಿ.ಡಿ. ಹಂಪಾಳಿ, ವಿವೇಕ ಜಾಗ್ರತ ಬಳಗದ ಅಧ್ಯಕ್ಷ ಎಂ.ಎಂ. ಹುಲ್ಮನಿ, ಪ್ರಶಾಂತಯ್ಯಶಾಸ್ತ್ರೀ ಮಠದ, ಬಸವಲಿಂಗ ಕುಮಾರಶಾಸ್ತ್ರೀ ಮಳಲಿಮಠ, ಅಕ್ಕನ ಬಳಗದ ಅಧ್ಯಕ್ಷ ಶಶಿಕಲಾ ಹಾದ್ರಿಹಳ್ಳಿ, ಬಸಮ್ಮ ಅಬಲೂರ, ಶಶಿಕಲಾ ಬೇತೂರ, ಶಶಿಕಲಾ ಕಾಯಕದ, ಎನ್.ಎಸ್. ಹೆಗ್ಗೇರಿ, ವೀರಭದ್ರಪ್ಪ ಚಿಟ್ಟೂರ, ಶಿವಾನಂದ ನ್ಯಾಮತಿ, ಎಂ.ಡಿ. ಸೀಮಿಕೇರಿ, ಇಂದುಧರ ಹಿರೇಮಠ, ಬಸವರಾಜ ಪೂಜಾರ, ಚಂದ್ರಣ್ಣ ಲಾಪೋಜಿ, ಶೇಖಣ್ಣ ಬೇತೂರ, ಮೃತ್ಯುಂಜಯ ಕಲ್ಯಾಣಿ ಹಾಗೂ ಸಮಾಜದವರು ಇದ್ದರು. ನಿವೃತ್ತ ಸಂಸ್ಕೃತ ಶಿಕ್ಷಕ ಎಸ್.ಆರ್. ಪಿಳಿಗಿಮಠ, ನಿಂಗಾಚಾರ ಮಾಯಾಚಾರಿ, ಯಶವಂತ ಲಾಪೋಜಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net