

ಮಹಾಲಿಂಗಪುರ: ಸಂಕೇಶ್ವರ ಪಟ್ಟಣದ ಎಸ್‌ಡಿವಿಎಸ್ ಸಂಘದ ಅನ್ನಪೂರ್ಣ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ರಿಸರ್ಚ್ ಕೇಂದ್ರದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಎ ಮೆಗಾ ನ್ಯಾಷನಲ್ ಲೇವಲ್ ಫೆಸ್ಟ್-2024’ ಕಾರ್ಯಕ್ರಮದಲ್ಲಿ ಮಹಾಲಿಂಗಪುರದ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲದ ವಿದ್ಯಾರ್ಥಿಗಳು ಸತತ ಎರಡನೇ ಬಾರಿಗೆ ಜನರಲ್ ಚಾಂಪಿಯನ್ ಟ್ರೋಫಿ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯ ಡಾ.ಕೆ.ಎಂ.ಅವರಾದಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ಹರ್ಷ ವ್ಯಕ್ತಪಡಿಸಿದ್ದಾರೆ.