

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನಗರದ ಜೆಎಸ್‌ಎಸ್ ಸಂಸ್ಥೆಯ ವಿದ್ಯಾರ್ಥಿಗಳು ವಿಶಿಷ್ಟ ಸಾಧನೆಗೈದಿದ್ದಾರೆ.
ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಬಿ.ಕಾಂ ವಿದ್ಯಾರ್ಥಿನಿ ರಕ್ಷಿತಾ ಗೊರವರ ಸಿಂಗಲ್ ರಿದಮಿಕ್, ಏರೋಬಿಕ್ಸ್ ಗ್ರುಪ್, ರಿದಮಿಕ್ ಗ್ರುಪ್‌ನಲ್ಲಿ 3 ಬೆಳ್ಳಿಯ ಪದಕ ಮತ್ತು ಹೂಪ್ ವೈಯಕ್ತಿಕ ಸ್ಪರ್ಧೆ, ಕ್ಲಬ್, ರಿಬ್ಬನ್, ವೈಯಕ್ತಿಕ ವೀರಾಗ್ರಣಿ, ಏರೋಬಿಕ್ ಟ್ರೇಯೋದಲ್ಲಿ 5 ಕಂಚಿನ ಪದಕ ಪಡೆದಿದ್ದಾಳೆ.
ಜೆಎಸ್‌ಎಸ್ ಆರ್.ಎಸ್. ಹುಕ್ಕೇರಿಕರ ಪಿಯು ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಮಾನೆ ರಿದಮಿಕ್ ಗ್ರುಪ್ ಮತ್ತು ಏರೋಬಿಕ್ ಗ್ರುಪ್‌ನಲ್ಲಿ 2 ಬೆಳ್ಳಿಯ ಪದಕ ಮತ್ತು ಫ್ಲೋರ್ ಇವೆಂಟ್, ಏರೋಬಿಕ್ಸ್ ಟ್ರೇಯೋ, ಟೀಮ್ ಚಾಂಪಿಯನ್‌ನಲ್ಲಿ 3 ಕಂಚಿನ ಪದಕ ಪಡೆದಿದ್ದಾಳೆ.
ಸಾಧಕ ಕ್ರೀಡಾಪಟುಗಳನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್, ಪ್ರಾಚಾರ್ಯೆ ಭಾರತಿ ಶಾನಭಾಗ ಹಾಗೂ ಸಿಬ್ಬಂದಿ ಅಭಿನಂದಿಸಿದರು.