ವಿವಿಧ ಸ್ಪರ್ಧೆಗಳಲ್ಲಿ ಗಿಬ್ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

Compitation Winners
Published on

ಕುಮಟಾ: ಇಲ್ಲಿನ ಕೆನರಾ ಎಜುಕೇಶನ್ ಸೊಸೈಟಿಯ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾ ಕೂಟದಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚೆಸ್ ಸ್ಪರ್ಧೆಯಲ್ಲಿ ಭೂಮಿಕಾ ನಾಗರಾಜ ಹೆಗಡೆ ಪ್ರಥಮ ಸ್ಥಾನ, ಟಿಜಿಟಿ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಪ್ರಣವ ಉದಯ ನಾಯ್ಕ ಪ್ರಥಮ ಸ್ಥಾನ, ಯೋಗಾಸನದಲ್ಲಿ ಸಂಜನಾ ದತ್ತಾತ್ರಯ ನಾಯ್ಕ ಮತ್ತು ದರ್ಶನ ಎಚ್. ಪ್ರಥಮ ಸ್ಥಾನ, 400 ಮೀ ಓಟದಲ್ಲಿ ಶರಣ ರೋಹಿದಾಸ ನಾಯ್ಕ ದ್ವಿತೀಯ ಹಾಗೂ 800 ಮೀ ಓಟದಲ್ಲಿ ನೀರಜ ಸಂತೋಷಕುಮಾರ ಇಳೆಗಾರ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಮುಖ್ಯ ಶಿಕ್ಷಕ ವಿನಾಯಕ ಶಾನಭಾಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net