6 ರಿಂದ 9ವರೆಗೆ ವಿಭಿನ್ನ ನಾಟಕಗಳ ಪ್ರದರ್ಶನ

03M.D.R.1 K.L.RAVI
ಕೆ.ಎಲ್.ರವಿ ಕಬ್ಬಾರೆ ಕಲಾವಿದ.
Published on

ಮದ್ದೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಹೊಳೆ ಆಂಜನೇಯಸ್ವಾಮಿ ಕಲಾ ಸಂಘದಿಂದ ನ. 6 ರಿಂದ 9ವರೆಗೆ 4 ವಿಭಿನ್ನ ನಾಟಕಗಳನ್ನು ನುರಿತ ಕಲಾವಿದರಿಂದ ನಗರದ ಹಳೇ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದೆ ಎಂದು ಕಲಾವಿದ ಕೆ.ಎಲ್.ರವಿ ಕಬ್ಬಾರೆ ತಿಳಿಸಿದ್ದಾರೆ.

ನ.6 ರಂದು ‘ತಂಗಿ ಅಲ್ಲ ತಾಯಿ’ ಅಥವಾ ‘ತಂಗಿ ತಂದ ಅತ್ತಿಗೆ’, 7ರಂದು ‘ತಾಯಿ ಕೊಟ್ಟ ಭಾಷೆ‘ ಅಥವಾ ‘ಮಾತಿಗೆ ತಪ್ಪದ ಮಗ’ ಎಂಬ ಸಾಮಾಜಿಕ ನಾಟಕಗಳು ಹಾಗೂ ನ.8 ರಂದು ‘ಕುರುಕ್ಷೇತ್ರ’ ಅಥವಾ ‘ಧರ್ಮರಾಜ್ಯ ಸ್ಥಾಪನೆ’. 9 ರಂದು ‘ರಾಜಸೂಯಯಾಗ’ ಅಥವಾ ‘ಜರಾಸಂಧನ ವಧೆ’ ಎಂಬ ಸಾಮಾಜಿಕ ನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

4 ದಿನಗಳು ನಿರಂತರವಾಗಿ ನಡೆಯುವ ನಾಟಕಕ್ಕೆ ಹಿರಿಯ, ಕಿರಿಯ ಕಲಾವಿದರು, ಸಾರ್ವಜನಿಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನಶಿಸುತ್ತಿರುವ ರಂಗ ಕಲೆ ಉಳಿಸಬೇಕು ಮತ್ತು ಬೆಳೆಸಬೇಕೆಂದು ಮನವಿ ಮಾಡಿದರು.

ಕಲಾವಿದರಾದ ಸಿ.ಕೆ.ಅಪ್ಪಾಜಿಗೌಡ, ಪೂಜಾರಿ ಮಹೇಶ್, ಬಿ.ಎಸ್.ಕುಮಾರಸ್ವಾಮಿ, ನಾಗೇಶ್, ಪುಟ್ಟಸ್ವಾಮಿ, ಎನ್.ಪಿ.ಚಂದ್ರು ಹಾಗೂ ಶ್ರೀ ಹೊಳೆ ಆಜಂನೇಯಸ್ವಾಮಿ ಕಲಾ ಸಂಘದ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net