ನ.24ಕ್ಕೆ ರಂಗಸಂಸ್ಕೃತಿ ತಂಡದ ‘ಭಾಗವತರ ನಾಟಕ ಮಂಡಳಿ’ ಪ್ರದರ್ಶನ

ranga
Published on

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ರಂಗಸಂಸ್ಕೃತಿ ತಂಡವು ನ.24ಕ್ಕೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಭಾಗವತರ ನಾಟಕ ಮಂಡಳಿ ಎಂಬ ಹಾಸ್ಯ ನಾಟಕ ಪ್ರದರ್ಶನ ಮಾಡಲಿದೆ.

ಲೋಕನಾಥ ದೀಕ್ಷಿತ್ ರಚಿಸಿ, ನಿರ್ದೇಶಿಸಿರುವ ನಾಟಕದ ನಿರ್ವಹಣೆ ಎಂ.ಲೋಕೇಶ್, ಪ್ರಸಾಧನ ಸೋಮಶೇಖರ ಜೆ. ಬೆಳಕು ಮತ್ತು ಸಂಗೀತ ಸಂಯೋಜನೆ ಶಿವಕುಮಾರ್ ಶೃಂಗಾರ್ ಮಾಡಿದ್ದಾರೆ.

ಪಾತ್ರವರ್ಗದಲ್ಲಿ ಪ್ರಭಾಕರ ಎಂ.ಆರ್., ಜಯಂತಿ ಜೆ., ವಿಜಯ ಬಿ.ಎಸ್. ನಾಗರಾಜ ಕೆ.ಆರ್. ಲೀಲಾ ಎಸ್.ಕುಮಾರ್, ನವೀನ, ಮಂಜುನಾಥ ಅಭಿನಯಿಸಲಿದ್ದಾರೆ.

ಸಂಜೆ 5 ಗಂಟೆಗೆ ನಡೆಯುವ ಕನ್ನಡ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ರಕ್ಷಾ ಅರವಿಂದ್ ಮತ್ತು ಸುಹಾಸಿನಿಯವರಿಂದ ಭರತನಾಟ್ಯ ಪ್ರದರ್ಶನ ನಂತರ ಸಂಜೆ 6.45ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net