ವೃತ್ತಿಯಲ್ಲಿ ಕಾರ್ಯಕ್ಷಮತೆ ಅಗತ್ಯ

5 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಕರು ಬೋಧನಾ ವಿಷಯದಲ್ಲಿ ಆಳವಾದ ಪ್ರಭುತ್ವ ಹಾಗೂ ವೃತ್ತಿಯಲ್ಲಿ ಉತ್ಸಾಹ ಮತ್ತು ಕಾರ್ಯಕ್ಷಮತೆ ಅಗತ್ಯ ಎಂದು ಸತ್ತೂರಿನ ಬಸವೇಶ್ವರ ಬಿಎಡ್​ ಕಾಲೇಜಿನ ಟ್ರಸ್ಟಿ ನಾಗರಾಜ ಕೊಟಗಿ ಅಭಿಪ್ರಾಯಪಟ್ಟರು.

ಇಲ್ಲಿನ ಸತ್ತೂರಿನ ರೂರಲ್​ ಬಿಎಡ್​ ಕಾಲೇಜಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಶಿಕ್ಷಕರು ಮತ್ತು ಶಿಕ್ಷಣ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದಲ್ಲಿ ಸದಾ ಅಧ್ಯಯನಶೀಲ ಪ್ರವೃತ್ತಿ ಅಗತ್ಯ. ತಮ್ಮ ವೃತ್ತಿಯಲ್ಲಿ ಅಪಾರ ಉತ್ಸಾಹ ಹಾಗೂ ಕಾರ್ಯಕ್ಷಮತೆ ಅಗತ್ಯ. ಬೋಧನೆಯಲ್ಲಿ ವಿವಿಧ ತಂತ್ರ ಅಳವಡಿಸಿ ಪಾಠ ಹೇಳಬೇಕು. ವಿದ್ಯಾರ್ಥಿಗಳು ಆಸಕ್ತಿ ಅಭಿರುಚಿ ಅವಲೋಕಿಸಿ ಪಾಠ ಬೋಧನೆ ಮಾಡಬೇಕು ಎಂದರು.

ನಿವೃತ್ತ ಉಪನ್ಯಾಸಕ ಜಿ. ಬಿ. ಸಜ್ಜನ ಅವರು ಶಿಕ್ಷಕರು ಹಾಗೂ ಶಿಕ್ಷಣ ಕುರಿತು ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಕೇಳುವುದರ ಮೂಲಕ ಅವರ ತಾರ್ಕಿಕ ಶಕ್ತಿ ಹೆಚ್ಚಿಸಬೇಕು. ಶಿಕ್ಷಕರಾದವರಿಗೆ ಸೃಜನಶಿಲತೆ ಮುಖ್ಯ. ವಿದ್ಯಾರ್ಥಿಗಳ ವರ್ತನೆಯಲ್ಲಿ ಪರಿವರ್ತನೆ ತರುವುದೇ ನಿಜವಾದ ಶಿಕ್ಷಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಎಡ್​ ಕಾಲೇಜಿನ ಅಧ್ಯ ಡಾ. ಶರಣಪ್ಪ ಕೊಟಗಿ ಮಾತನಾಡಿದರು.

ವಿ.ಜಿ. ಪಾಟಿಲ, ಪ್ರಾಚಾರ್ಯ ಮಹಾಂತೇಶ ಹಿರೇಮಠ, ರಂಗನಾಥ ದಾಸರ, ಎಲ್​.ವೈ. ಬುಡ್ಡಣ್ಣವರ, ವಾಗೀಶ ಹಿರೇಮಠ, ನವೀನ ಕೊರಡೂರ, ಪವಿತ್ರಾ ಪೂಜಾರ, ಇತರರು ಇದ್ದರು.

ಮಲ್ಲಪ್ಪ ಪೋಲಿಸ್​ ಪಾಟೀಲ ಸ್ವಾಗತಿಸಿದರು. ಸಂತೋಷ ಹರದಗಟ್ಟಿ ನಿರೂಪಿಸಿದರು. ಸೃಷ್ಟಿ ನಾಯಕ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net