ಪಪೂ ಕಾಲೇಜು ಕ್ರೀಡಾಕೂಟದಲ್ಲಿ ಸಾಧನೆ

Sports
Published on

ಕುಮಟಾ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಇಲ್ಲಿನ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

ಕಬಡ್ಡಿಯ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ, ಮಾಲತೇಶ ಎಂ ಎಚ್. 400 ಮೀಟರ್ ಓಟದಲ್ಲಿ ದ್ವಿತೀಯ ಹಾಗೂ 5 ಕಿಮೀ ಕ್ರಾಸ್ ಕಂಟ್ರಿ ಓಟದಲ್ಲಿ ಪ್ರಥಮ ಸ್ಥಾನ, 4*100 ಮೀಟರ್ ರಿಲೆಯಲ್ಲಿ ಪ್ರಥಮ ಸ್ಥಾನ. ಚಂದ್ರಶೇಖರ ಗೌಡ 800 ಮೀಟರ್ ಓಟದಲ್ಲಿ ಪ್ರಥಮ, ನರೇಂದ್ರ ಗೌಡ 3000 ಮೀಟರ್ ಓಟದಲ್ಲಿ ಪ್ರಥಮ, ನಿಖಿಲ್ ಪಟಗಾರ ದ್ವಿತೀಯ. ಪೋಲ್​ವಾಲ್ಟ್​ನಲ್ಲಿ ದರ್ಶನ ಗೌಡ ಪ್ರಥಮ, ಹೇಮಂತ ಭಂಡಾರಿ ದ್ವಿತೀಯ. ಹ್ಯಾಮರ್ ಎಸೆತದಲ್ಲಿ ಸಂದೀಪ ಗಾವಡಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಾಲಕಿಯರ 100 ಮೀಟರ್ ಓಟದಲ್ಲಿ ಶಾಲಿನಿ ಗೌಡ ದ್ವಿತೀಯ ಮತ್ತು ಜಾವೇಲಿನ್ ಎಸೆತದಲ್ಲಿ ಪ್ರಥಮ, ಮಧುರಾ ಗೌಡ ದ್ವಿತೀಯ, 5000 ಮೀಟರ್ ನಡಿಗೆಯಲ್ಲಿ ನಮೃತಾ ನಾಯ್ಕ ಪ್ರಥಮ, ನಂದಿತಾ ಪಟಗಾರ ದ್ವಿತೀಯ, 110 ಮೀಟರ್ ಹರ್ಡಲ್ಸ್​ನಲ್ಲಿ ತನುಶ್ರೀ ಮಡಿವಾಳ ಪ್ರಥಮ, 400 ಮೀಟರ್ ಹರ್ಡಲ್ಸ್​ನಲ್ಲಿ ತೇಜಸ್ವಿ ಹರಿಕಾಂತ ಪ್ರಥಮ, ಕಶಿಶ್ ಗೌಡ ದ್ವಿತೀಯ, ಉದ್ದ ಜಿಗಿತದಲ್ಲಿ ಕಶಿಶ್ ಗೌಡ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಚಾರ್ಯ ಸತೀಶ ಬಿ.ನಾಯ್ಕ ತಿಳಿಸಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net