ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ

1 GVT 06
ಗಂಗಾವತಿ ಉಪ್ಪಿನ ಮಾಳಿ ಕ್ಯಾಂಪ್ ಸ.ಹಿ.ಪ್ರಾ.ಶಾಲೆಯಲ್ಲಿ ಸಮಾನಮನಸ್ಕರ ತಂಡದಿಂದ ವೈದ್ಯ ಮತ್ತು ಪತ್ರಿಕಾ ದಿನಾಚರಣೆ ನಿಮಿತ್ತ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ಹಿರಿಯ ಪತ್ರಕರ್ತ ಅಶೋಕ ಸ್ವಾಮಿ ಹೇರೂರು, ವೈದ್ಯರಾದ ಡಾ.ಅಮರಗುಂಡಪ್ಪ ಜೀಡಿ, ಮುಖ್ಯಶಿಕ್ಷಕಿ ವೆಂಕಟಲಕ್ಷ್ಮೀ ಬೆಲ್ಲದ್ ಇತರರಿದ್ದರು.
Published on

ಗಂಗಾವತಿ: ನಗರದ ಉಪ್ಪಿನ ಮಾಳಿ ಕ್ಯಾಂಪ್ ಸ.ಹಿ.ಪ್ರಾ.ಶಾಲೆಯಲ್ಲಿ ಸಮಾನಮನಸ್ಕರ ತಂಡದಿಂದ ವೈದ್ಯ ಮತ್ತು ಪತ್ರಿಕಾ ದಿನಾಚರಣೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದ ಹಿರಿಯ ಪತ್ರಕರ್ತ ಅಶೋಕ ಸ್ವಾಮಿ ಹೇರೂರು ಮಾತನಾಡಿ, ಆರೋಗ್ಯ ಮತ್ತು ಸಮಾಜಕ್ಕೆ ಚಿಕಿತ್ಸೆ ನೀಡುವ ವೈದ್ಯ ಮತ್ತು ಪತ್ರಕರ್ತರ ಕಾರ್ಯ ಪ್ರಶಂಸನೀಯವಾಗಿದ್ದು, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ವೈದ್ಯರಾದ ಅಮರೇಶ ಆರಳಿ, ಎಸ್.ಬಿ.ಹಂದ್ರಾಳ್, ಹಿರಿಯ ಪತ್ರಕರ್ತ ಅಶೋಕ ಸ್ವಾಮಿ ಹೇರೂರು, ಉದ್ಯಮಿ ಅಪ್ಪಣ್ಣ ಅರಳಿ ಮತ್ತು ನಿವೃತ್ತ ಶಿಕ್ಷಕ ಬಿ.ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಕರಾದ ನೀಲಮ್ಮ ಹಿರೇಮಠ, ಮಹಾರುದ್ರಸ್ವಾಮಿ, ಮುಖಂಡ ಕುರಗೋಡಪ್ಪ ಕೋರಿ, ಪತ್ರಕರ್ತರಾದ ಪರಶುರಾಂ ಕಲ್ಗುಡಿ, ಬಿ.ದೇವರಾಜ, ದೇವಾನಂದ, ಸಾಹಿತಿ ಅರಳಿ ನಾಗಭೂಷಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net