ಶ್ರೀನಿವಾಸಪುರ: ಪೊಲೀಸ್ ಠಾಣೆಗೆ ನೊಂದು ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಶ್ರೀ ಅವರ ಸಮಸ್ಯೆ ಪರಿಹರಿಸಬೇಕು. ಇಲಾಖೆಯ ಮೇಲೆ ನಂಬಿಕೆ ಬರುವ ಹಾಗೆ ಕರ್ತವ್ಯ ನಿರ್ವಹಿಸು ವಂತೆ ಠಾಣಾಧಿಕಾರಿಗಳಿಗೆ ಎಸ್‌ಪಿ ಬಿ.ನಿಖಿಲ್ ಸೂಚಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿ ದಾಖಲೆ ಪರಿಶೀಲಿಸಿ ಮಾತನಾಡಿ, ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಟನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಗಿದೆ. ಈಗಾಗಲೇ ತನಿಖಾ ಹಂತದಲ್ಲಿರುವ 60 ಪ್ರಕರಣಗಳನ್ನು ಕಡಿಮೆ ವಾಡಲಾಗಿದೆ. ಸಾರ್ವಜನಿಕರಿಗೆ ವಿವಿಧ ಪ್ರಕರಣಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಾಗರಿಕರು ಎದುರಿಸುವ ತೊಂದರೆಯ ಬಗ್ಗೆ ವಾಹಿತಿ ಪಡೆದು ಇಲಾಖೆಯಿಂದ ಅರಿವು ಮೂಡಿಸುವ ಭರವಸೆ ನೀಡಿದರು.
ಪಟ್ಟಣದಲ್ಲಿ ದಿನೇದಿನೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿರುವ ಕಾರಣ ಪ್ರಮುಖ ವೃತ್ತಗಳಲಿ ಟ್ರಾಫಿಕ್ ಸಿಗ್ನಲ್,್ಲ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ರೈತರ ಜಮೀನಿಗೆ ಸಂಬಂಧಿಸಿದ ವ್ಯಾಜ್ಯಗಳು ಹೆಚ್ಚಿದ್ದು, ಅವುಗಳನ್ನು ನ್ಯಾಯಾಲಯದ ಮೂಲಕ ಪರಿಹರಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಕುಂದುಕೊರತೆ ಸಭೆ ಆಯೋಜಿಸಿ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಹಾಗೂ ಸಿಬ್ಬಂದಿ ಇದ್ದರು.
ಸಿಸಿ ಕ್ಯಾಮರಾ ಅಳವಡಿಸಿ
ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಪ್ರಕಾರ 50ಕ್ಕಿಂತ ಹೆಚ್ಚು ಜನರು ಸೇರುವ ಅಂಗಡಿ ಮುಂಗಟ್ಟಿನ ಮಾಲೀಕರು ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಇಂತಹ ಅಂಗಡಿ ವಾಲೀಕರಿಗೆ ಠಾಣೆಯಿಂದ ನೋಟಿಸ್ ಕೊಡಲಾಗುವುದು. ಹಾಗೂ ಜನಸಂದಣಿ ಇರುವ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸೂಚಿಸಲಾಗುವುದು. ಜಿಲ್ಲೆಯಲ್ಲಿ ಇತ್ತೀಚಿಗೆ ಕಳವಾಗಿದ್ದ 57 ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.