ಉತ್ತಮ ಸಂಸ್ಕಾರದಿಂದ ಪರಿಪೂರ್ಣ ವ್ಯಕ್ತಿತ್ವ

Perfect personality with good manners
ನಿಡಗುಂಡಿ ತಾಲೂಕಿನ ಮುಕರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯ 7ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಉದ್ಘಾಟಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಶಶಿಧರ ಮಾಮನಿ, ಸಾಯಬಣ್ಣ ಮಸಿಬಿನಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದರೇ ಅವರು ಮುಂದೆ ಜೀವನದಲ್ಲಿ ಎಂದೂ ತಪ್ಪು ದಾರಿಗೆ ನಡೆಯುವುದಿಲ್ಲ ಎಂದು ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹೇಳಿದರು.

ನಿಡಗುಂದಿ ತಾಲೂಕಿನ ಮುಕರ್ತಿಹಾಳ ಗ್ರಾಮದ ಮಾತೋಶ್ರೀ ಶಕುಂತಲಾಬಾಯಿ ಬೆಳ್ಳಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಡೆದ ಶಾಲೆ 7ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಉತ್ತಮ ಶೈಕ್ಷಣಿಕ ಗುಣಮಟ್ಟದಿಂದ ಕೂಡಿರಲು ಶಿಕ್ಷಣ ಇಲಾಖೆ ಹಗಲಿರುಳು ಶ್ರಮಿಸುತ್ತದೆ. ಪ್ರಾಥಮಿಕ ಶಾಲೆಗಳಲ್ಲಿಯೇ ಮಕ್ಕಳಿಗೆ ಉತ್ತಮ ಅಡಿಪಾಯ ಹಾಕಿದರೆ ಮುಂದೆ ಸಮಾಜದಲ್ಲಿ ಪರಿಪೂರ್ಣ ವ್ಯಕ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಲನಚಿತ್ರ ನಿರ್ದೇಶಕಿ, ನಟಿ ಮಾಲತಿಗೌಡ ಮಾತನಾಡಿ, ಎಲ್ಲ ಪಾಲಕರು ಮಕ್ಕಳೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಳ್ಳಬೇಕು. ಈಗ ನಾವು ಮಕ್ಕಳನ್ನು ಉತ್ತಮ ಶಿಕ್ಷಣ ಕೊಡಿಸುವ ನೆಪದಲ್ಲಿ ದೂರವಿಟ್ಟರೆ ಮುಂದೊಂದು ದಿನ ಅವರು ನಮ್ಮನ್ನು ದೂರವಿಡುತ್ತಾರೆ ಎಂದರು.

ನಾಗರದಿನ್ನಿ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸಿ ಆಶಿರ್ವಚನ ನೀಡಿದರು. ಶಾಲೆ ಅಧ್ಯಕ್ಷ ಡಾ. ರವೀಂದ್ರ ಬೆಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಯುಕೆಜಿ ಮಕ್ಕಳ ಪದೋನ್ನತಿ ಸಮಾರಂಭ ನಡೆಯಿತು.

ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ನೃತ್ಯ, ನಾಟಕ, ರೂಪಕ ಮತ್ತು ಏಕಾಭಿನಯ ಮೂಲಕ ನೆರೆದವರನ್ನು ರಂಜಿಸಿದರು.

ಶಶಿಧರ ಮಾಮನಿ, ಸಾಯಬಣ್ಣ ಮಸಿಬಿನಾಳ, ಶಿವಾನಂದ ಹೋನ್ಯಾಳ, ಗಿರಿಮಲ್ಲಪ್ಪ ಜೋಗೂರ, ಪ್ರವೀಣ ಬಾಳಿಗೇರಿ, ಶಾಲೆ ಆಡಳಿತ ಮಂಡಳಿಯ ಕೆ.ಎಲ್. ದಶವಂತ, ವಿಜಯಕುಮಾರ ಸಿ, ಮುಖ್ಯ ಶಿಕ್ಷಕಿ ನಿವೇದಿತಾ ರೂಢಗಿ, ರೇಣುಕಾ ಗುಣಕಿ, ಚೈತ್ರಾ ಗುಳೇದಗುಡ್ಡ, ರಜಿಯಾಬಾನು ಬಿಳೆಕುದರಿ, ಕೀರ್ತಿ ಚಿಮ್ಮಲಗಿ, ರೂಪಾ ಪಟ್ಟಣಶೆಟ್ಟಿ, ಕಾಶಿಬಾಯಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net