

ಹುಬ್ಬಳ್ಳಿ: ಕಳೆದ ಹತ್ತು ವರ್ಷಗಳ ಕಾಲ ದುರಾಡಳಿತ ನೀಡಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಪೂರ್ವ ಕ್ಷೇತ್ರದ ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಬಿಜೆಪಿಗೆ ಜನರು ಬಹುಮತ ನೀಡದೆ ಗರ್ವಭಂಗ ಮಾಡಿದ್ದಾರೆ. ಇಂಡಿಯಾ ಉತ್ತಮ ಸಾಧನೆ ಮಾಡಿದ್ದು, ಒಂದು ಹಂತದಲ್ಲಿ ಸರ್ಕಾರ ರಚಿಸುವ ಅವಕಾಶ ಕೂಡ ಮತದಾರರು ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಹೈ ಕಮಾಂಡ್ ಸೂಕ್ತ ನಿರ್ದಾರ ಕೈಗೊಳ್ಳಲಿದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸಂಸದರ ಬಲ ಒಂದರಿಂದ 9ಕ್ಕೆ ಏರಿದೆ. ಮತ ಗಳಿಕೆಯಲ್ಲಿ ಬಿಜೆಪಿ ಶೇ. 46ರಷ್ಟು ಪಾಲು ಪಡೆದರೆ, ಕಾಂಗ್ರೆಸ್ಗೆ ಶೇ. 45ರಷ್ಟು ಲಭಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.