

ವಿಜಯಪುರ : ಭಾಷಾ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಕಾರ್ಯಾಗಾರಗಳು ಸಹಕಾರಿಯಾಗಲಿದೆ ಎಂದು ಆರ್ಕೆಎಂ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಶಂಭುಲಿಂಗ ಕರ್ಪೂರಮಠ ಹೇಳಿದರು.
ನಗರದ ಸುಕೂನ್ ಲೇಔಟ್ ಬಳಿಯ ಆರ್ಕೆಎಂ ಪಿಯು ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರ ಸಂವಾದಾತ್ಮಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಪಿಯು ಇಂಗ್ಲಿಷ್ ಉಪನ್ಯಾಸಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂಗ್ಲಿಷ್ ಪರಿಪೂರ್ಣ ಕಲಿಕೆಗೆ ಆದ್ಯತೆ ಅಗತ್ಯ. ಈ ನಿಟ್ಟಿನಲ್ಲಿ ಪದವಿ ಪೂರ್ವ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಭಾಷಾ ವಿಷಯಗಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮಾಡುವ ಗುರುತರ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಎಲ್ಆರ್. ಹಳ್ಳದಮನಿ, ಡಾ. ಸುಜಾತಾ ಕಟ್ಟಿಮನಿ, ಸಿ.ಎಸ್. ಪೂಜಾರಿ, ಎಸ್.ಎಂ. ಶೇಖ್, ಅಶೋಕ ಬಿರಾದಾರ, ಕಿರಣ ನಾಡಕಟ್ಟಿ, ರೂಪಕಲಾ ಪಾವಸೆ ಇಂಗ್ಲಿಷ್ ಭಾಷಾ ವಿಷಯದ ಕಲಿಕೆಯ ಬಗ್ಗೆ ವಿಷಯ ಮಂಡಿಸಿದರು.
ಪ್ರಾಂಶುಪಾಲೆ ಮೇಧಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.