ಪೆರ್ಡೂರು ಮನ್ಮಹಾರಥೋತ್ಸವ: 65 ಸಾವಿರಕ್ಕೂ ಹೆಚ್ಚು ಬಾಳೆಹಣ್ಣು ಹರಕೆ ಸಮರ್ಪಣೆ

perdoor ratha
Published on

ಹೆಬ್ರಿ: ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಂಗಳವಾರ ಮನ್ಮಹಾರಥೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ನೆರವೇರಿತು.

ಇಲ್ಲಿನ ದೇವರು ‘ಕದಳಿಪ್ರಿಯ ಅನಂತಪದ್ಮನಾಭ’ ಎಂದು ಖ್ಯಾತಿ ಪಡೆದಿದ್ದು, ದೇವಸ್ಥಾನಕ್ಕೆ ಹರಕೆಯ ರೂಪದಲ್ಲಿ 65 ಸಾವಿರಕ್ಕೂ ಹೆಚ್ಚು ಬಾಳೆಹಣ್ಣು ಸಮರ್ಪಣೆಯಾಗಿದೆ. ಸೇವೆಯ ನಂತರ ಹಂಚಿ ತಿನ್ನಬೇಕು, ಹೆಚ್ಚು ಬಾಳೆಹಣ್ಣು ಸೇವಿಸುವವರಿಗೆ ದೇವರ ಅನುಗ್ರಹ ಹೆಚ್ಚು ದೊರಕುತ್ತದೆ ಎಂಬ ಪ್ರತೀತಿಯಿದೆ. ಶ್ರೀ ಕ್ಷೇತ್ರದಲ್ಲಿ ಮಧ್ಯಾಹ್ನದ ಅನ್ನಸಂತರ್ಪಣೆಯಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಜನ ಭಾಗಿಯಾಗಿ, ಪ್ರಸಾದ ಸ್ವೀಕರಿಸಿದರು.

ವಿಶೇಷವಾಗಿ ನವ ವಿವಾಹಿತ ಜೋಡಿಗಳು ಜಾತ್ರಾ ಮಹೋತ್ಸವ ಸಂದರ್ಭ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪ್ರಧಾನ ಹೋಮ, ಕಲಶಾಭಿಷೇಕ, ರಥ ಹೋಮ, ರಥ ಸಂಪ್ರೋಕ್ಷಣೆ, ಕೊಡಿ ಪೂಜೆ, ಮಹಾಪೂಜೆ, ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ಅಷ್ಟವಾಧನ ಸೇವೆ, ಶ್ರೀ ಭೂತಬಲಿ, ಕವಾಟ ಬಂಧನ ಪೂಜಾ ಕಾರ್ಯಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net