ಕಂಪ್ಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಂಪ್ಲಿ ತಾಲೂಕು ಶೇ.60.57 ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ ಒಟ್ಟು 1,872ವಿದ್ಯಾರ್ಥಿಗಳಲ್ಲಿ 1,134ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 663ವಿದ್ಯಾರ್ಥಿನಿಯರಿದ್ದಾರೆ. ಇವರಲ್ಲಿ ವಿದ್ಯಾಸಾಗರ ಶಾಲೆಯ ಎಚ್.ನಂದಿತಾ 622ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ 4ನೇಸ್ಥಾನ, ಜಿಲ್ಲೆಗೆ ಹಾಗೂ ತಾಲೂಕಿಗೆ ಪ್ರಥಮ, ಚೇತನಾ ವಿದ್ಯಾನಿಕೇತನಾ ಶಾಲೆಯ ಪಿ.ನಯನ 619ಅಂಕಗಳಿಸುವ ಮೂಲಕ ತಾಲೂಕಿಗೆ ದ್ವಿತೀಯ ಸ್ಥಾನ, ವಿದ್ಯಾಸಾಗರ ಶಾಲೆಯ ಕೆ.ಅಹ್ಮದ್ ಹುಸೇನ್‌ಖಾನ್ 614ಅಂಕಗಳಿಸುವ ಮೂಲಕ ತಾಲೂಕಿಗೆ ತೃತೀಯ ಸ್ಥಾನಗಳಿಸಿದ್ದಾರೆ ಎಂದು ಇಸಿಒ ಟಿ.ಎಂ.ಬಸವರಾಜ ತಿಳಿಸಿದ್ದಾರೆ.
ತಾಲೂಕಿನ ರಾಮಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಶೇ.60 ಫಲಿತಾಂಶ ಗಳಿಸಿದ್ದರು, ಪರೀಕ್ಷೆಗೆ ಕುಳಿತ 193ವಿದ್ಯಾರ್ಥಿಗಳಲ್ಲಿ 115ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಬಿ.ದೇವರಾಜ 592ಅಂಕ, ಎಚ್.ಟಿ.ಅಂಜಲಿ 591ಅಂಕ, ಬಿ.ಎಂ.ಅನುಷಾ 574ಅಂಕಗಳನ್ನುಗಳಿಸಿ ಶಾಲೆಗೆ ಟಾಪರ್ ಆಗಿದ್ದಾರೆ ಎಂದು ಮುಖ್ಯಶಿಕ್ಷಕಿ ಜೆ.ಅರುಣಾ ತಿಳಿಸಿದ್ದಾರೆ.
ದೇವಸಮುದ್ರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಶೇ.67.22 ಫಲಿತಾಂಶ ಸಾಧಿಸಿದ್ದಾರೆ. ಪರೀಕ್ಷೆಗೆ ಕುಳಿತ 119ವಿದ್ಯಾರ್ಥಿಗಳಲ್ಲಿ 80ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ಅನು 567ಅಂಕಗಳಿಸುವ ಮೂಲಕ ಶಾಲೆಗೆ ಟಾಪರ್ ಆಗಿದ್ದಾಳೆ ಎಂದು ಮುಖ್ಯಶಿಕ್ಷಕಿ ಎಚ್.ಶಕುಂತಲಾ ತಿಳಿಸಿದ್ದಾರೆ.
ಪಟ್ಟಣದ ಎಸ್.ಜಿ.ವಿ.ಎಸ್.ಎಸ್.ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಶೇ.57.85ರಷ್ಟು ಫಲಿತಾಂಶ ಸಾಧಿಸಿದ್ದು, ಪರೀಕ್ಷೆಗೆ ಕುಳಿತ 148ವಿದ್ಯಾರ್ಥಿನಿಯರಲ್ಲಿ 85ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಆರ್.ನಂದಿನಿ 548ಅಂಕಗಳನ್ನು, ಶ್ರಾವಣಿ 545ಅಂಕ, ವರಲಕ್ಷ್ಮಿ 533ಅಂಕಗಳನ್ನು ಗಳಿಸಿದ್ದಾರೆಂದು ಉಪ ಪ್ರಾಚಾರ್ಯ ಬಸವರಾಜ ಪಾಟೀಲ್ ತಿಳಿಸಿದ್ದಾರೆ.
ಸ್ಥಳೀಯ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಶೇ.45.16 ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ 62ವಿದ್ಯಾರ್ಥಿಗಳಲ್ಲಿ 28ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆರ್.ಮನೋಜ 504ಅಂಕ, ಸಿ.ಎ.ಕೊಟ್ರೇಶ 498ಅಂಕ, ಎಸ್.ದೇವರಾಜ 467ಅಂಕ ಗಳಿಸಿ ಶಾಲೆಗೆ ಟಾಪರ್ ಆಗಿದ್ದಾರೆ ಎಂದು ಉಪ ಪ್ರಾಚಾರ್ಯೆ ಸುಜಾತಾ ತಿಳಿಸಿದ್ದಾರೆ.
ಪಟ್ಟಣದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಶೇ.84ರಷ್ಟು ಫಲಿತಾಂಶ ಸಾಧಿಸಿದ್ದು, ಪರೀಕ್ಷೆಗೆ ಕುಳಿತ 45ವಿದ್ಯಾರ್ಥಿಗಳಲ್ಲಿ 38ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಸಬೀನಾ 593ಅಂಕ, ಯು.ಬಿ.ಭೂಮಿಕಾ 578ಅಂಕ, ಚೈತ್ರಾ ಬಲಕುಂದಿ 575ಅಂಕಗಳನ್ನು ಗಳಿಸಿದ್ದಾರೆ ಎಂದು ಪ್ರಾಚಾರ್ಯ ಕೆ.ಬಸವರಾಜ ತಿಳಿಸಿದ್ದಾರೆ.