ಷೇರುದಾರ ಸದಸ್ಯರಿಗೆ ಶೇ. 5 ಡಿವಿಡೆಂಡ್

16sdp1 SANMAN
Published on

ಸಿದ್ದಾಪುರ: ತಾಲೂಕಿನ ಶಿರಳಗಿಯ ಸೇವಾ ಸಹಕಾರಿ ಸಂಘ 2022-23ನೇ ಸಾಲಿನಲ್ಲಿ 7 ಲಕ್ಷದ 22 ಸಾವಿರ ರೂ.ಗಳಷ್ಟು ಲಾಭ ಹೊಂದಿದ್ದು ಷೇರುದಾರ ಸದಸ್ಯರಿಗೆ ಶೇ. 5 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪರಶುರಾಮ ಕೆ. ನಾಯ್ಕ ಹೇಳಿದರು.

ಸಂಘದ ಸಭಾಭವನದಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘ 3 ಕೋಟಿ 28 ಲಕ್ಷ ರೂ. ಗಳಷ್ಟು ಠೇವನ್ನು ಹೊಂದಿದೆ. ಎಪಿಎಂಸಿಯಿಂದ ಗೋದಾಮು ಹಾಗೂ ಫೆಡರೇಷನ್​ನ ಆರ್ಥಿಕ ಸಹಾಯದಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸದಸ್ಯರು ತಮ್ಮ ಮಹಸೂಲನ್ನು ಸಂಘದ ಮೂಲಕವೇ ವಿಕ್ರಿ ಮಾಡಿ ಸಂಘವನ್ನು ಬಲಪಡಿಸಬೇಕು ಎಂದರು.

ಮುಖ್ಯಕಾರ್ಯನಿರ್ವಾಹಕ ದಯಾನಂದ ಕೆ. ತಡಗಳಲೆ ಅವರು, ರ್ಚಚಿಸತಕ್ಕ ವಿಷಯಗಳನ್ನು ವಿವರಿಸಿ, ಅಗತ್ಯ ಮಾಹಿತಿಗಳನ್ನು ಸಭೆಗೆ ವಿವರಿಸಿದರು. ಸಿಬ್ಬಂದಿ ರಾಜು ಕೆ. ನಾಯ್ಕ ಹಿಂದಿನ ಸಭೆಯ ಠರಾವು ಓದಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಗಜಾನನ ಟಿ. ಮಡಿವಾಳ, ಸದಸ್ಯರಾದ ಗಣಪತಿ ನಾಯ್ಕ ಹಂಜಕ್ಕಿ, ದಯಾನಂದ ಚಲುವಾದಿ ಮುಗದೂರು, ಶಕುಂತಲಾ ನಾಯ್ಕ ಶಿರಳಗಿ, ದೇವಕಿ ನಾಯ್ಕ ಮುಗದೂರು, ಈಶ್ವರ ನಾಯ್ಕ ಬಿಕ್ಕಳಸೆ, ರಾಘವೇಂದ್ರ ನಾಯ್ಕ ಶಿರಳಗಿ, ಮಹಾಬಲೇಶ್ವರ ಮಡಿವಾಳ ಮುಗದೂರು, ಗುರುವಯ್ಯ ಗೌಡ ಹಂಜಕ್ಕಿ, ಜಗದೀಶ ನಾಯ್ಕ ಬಿಕ್ಕಳಸೆ, ಶ್ರೀಕಾಂತ ಎಲ್. ಭಟ್ಟ ಕೊಳಗಿ, ಇತರರು ಉಪಸ್ಥಿತರಿದ್ದರು.

ಈ ಮೊದಲಿನ ಅವಧಿಯಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ತಿಮ್ಮಪ್ಪ ಎಚ್. ನಾಯ್ಕ ಶಿರಳಗಿ, ಪಾರ್ವತಮ್ಮ ಗೌಡರ್ ಬಿಕ್ಕಳಸೆ, ಕೆರೆಸ್ವಾಮಿ ಎಂ. ಗೌಡರ್ ವಡಗೇರಿ, ಗಂಗಾಧರ ಎಸ್. ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪರಶುರಾಮ ಕೆ. ನಾಯ್ಕ, ಗಜಾನನ ಟಿ. ಮಡಿವಾಳ, ಗಣಪತಿ ನಾಯ್ಕ ಹಂಜಕ್ಕಿ, ದಯಾನಂದ ಚಲುವಾದಿ ಮುಗದೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net