ಶೇ. ೧೨ರಷ್ಟು ಲಾಭಾಂಶ ಘೋಷಣೆ

2 ckm 1
ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್‌ನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಉದ್ಘಾಟನೆ ನೆರವೇರಿತು. ಎಚ್.ಎನ್.ನಂಜೇಗೌಡ, ಎಚ್.ಸಿ.ಶಶಿಪ್ರಸಾದ್, ಎಂ.ವಿ.ಷಡಕ್ಷರಿ, ಪದ್ಮಾ ತಿಮ್ಮೇಗೌಡ, ಜಿ.ರಘು, ಎಂ.ಎಸ್.ಉಮೇಶ್, ಭಗವತಿ ಹರೀಶ್, ಕೆ.ಎಸ್.ಧರ್ಮರಾಜ, ಶೈಲಜಾ ಮಂಜುನಾಥ್, ಸಿ.ಆರ್.ಮಂಜು, ಕೆ.ಟಿ.ಮಂಜುನಾಥ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಚಿಕ್ಕಮಗಳೂರು ಪಟ್ಟಣ ಸಹಕಾರ ಬ್ಯಾಂಕ್ ೨೦೨೩-೨೪ನೆ ಸಾಲಿನಲ್ಲಿ ೧.೪೫ಕೋಟಿರೂ. ನಿವ್ವಳ ಲಾಭಗಳಿಸಿದ್ದು, ಇದರಲ್ಲಿ ಷೇರುದಾರರಿಗೆ ಶೇ. ೧೨ರಷ್ಟು ಲಾಭಾಂಶ ಘೋಷಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಚ್.ಎನ್.ನಂಜೇಗೌಡ ತಿಳಿಸಿದರು.

ಪಟ್ಟಣ ಸಹಕಾರ ಬ್ಯಾಂಕ್‌ನ ೨೮ನೇ ವಾರ್ಷಿಕ ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೮,೮೦೫ ಲಕ್ಷ ರೂ.ಗಳ ದುಡಿಯುವ ಬಂಡವಾಳವನ್ನು ಹೊಂದಿರುವ ಬ್ಯಾಂಕ್ ಆಡಿಟ್ ವರ್ಗೀಕರಣದಲ್ಲಿ ಎ ಸ್ಥಾನದಲ್ಲಿ ಸತತವಾಗಿ ಮುನ್ನಡೆದಿದೆ ಎಂದರು.
೧೯೯೭ರಲ್ಲಿ ಸ್ವಾತಂತ್ರö್ಯಯೋಧ ಸಿ.ಎಂ.ಎಸ್.ಶಾಸ್ತಿçಗಳ ತಂಡದ ಪರಿಶ್ರಮದೊಂದಿಗೆ ೧,೮೦೦ಷೇರುದಾರರ ೮.೭ಲಕ್ಷರೂ. ಬಂಡವಾಳದೊAದಿಗೆ ಬ್ಯಾಂಕ್ ಪ್ರಾರಂಭಗೊAಡಿತ್ತು. ಪ್ರಸ್ತುತ ೪,೨೨೯ಷೇರುದಾರರಿದ್ದು ೩೧೧.೮೬ಲಕ್ಷ ರೂ. ಷೇರು ಮೊಬಲಗನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಳೆದ ೨೭ವರ್ಷಗಳಿಂದಲೂ ಸತತವಾಗಿ ಲಾಭದಾಯಕವಾಗಿ ಬ್ಯಾಂಕ್ ಮುನ್ನಡೆದಿದ್ದು, ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಬ್ಯಾಂಕಿAಗ್ ಕ್ಷೇತ್ರದ ಹೊಸ ಸೇವೆಗಳನ್ನು ಬಳಸಿಕೊಳ್ಳುತ್ತಿದೆ. ಜಿಲ್ಲೆಯ ಪ್ರಥಮ ಅರ್ಬನ್ ಬ್ಯಾಂಕ್ ಕೀರ್ತಿಗೆ ಪಾತ್ರವಾಗಿದೆ. ಸ್ಪರ್ಧಾತ್ಮಕ ದಿನಗಳಲ್ಲಿ ರಾಷ್ಟಿçÃಕೃತ ಬ್ಯಾಂಕ್‌ಗಳ ಪೈಪೋಟಿಯ ನಡುವೆಯೂ ಪ್ರಗತಿಯಿಂದ ಮುನ್ನಡೆಯಲು ಷೇರುದಾರರು, ಗ್ರಾಹಕರು, ಆಡಳಿತಮಂಡಳಿ ಹಾಗೂ ಸಿಬ್ಬಂದಿ ಬೆಂಬಲ ಮತ್ತು ಸಹಕಾರ ಕಾರಣ ಎಂದು ಹೇಳಿದರು.
ಪ್ರಸ್ತುತ ೫,೪೦೬.೪೯ಲಕ್ಷ ರೂ. ಸಾಲ ಮತ್ತು ಮುಂಗಡಗಳನ್ನು ನೀಡಲಾಗಿದೆ. ೧,೦೫೦.೭೫ಲಕ್ಷ ರೂ. ಆಪದ್ಧನ ಮತ್ತು ಇತರೆ ನಿಧಿಗಳನ್ನು ಬ್ಯಾಂಕ್ ಹೊಂದಿದೆ. ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಗ್ರಾಹಕರ ಬೇಡಿಕೆಯ ಹಿನ್ನಲೆಯಲ್ಲಿ ಬೈಪಾಸ್ ರಸ್ತೆಯಲ್ಲಿ ಶಾಖೆಯನ್ನು ಆರಂಭಿಸಿದೆ ಎಂದರು.
೩೧೧ಲಕ್ಷ ರೂ. ಷೇರುಬಂಡವಾಳ, ೭,೪೫೫ಲಕ್ಷ ರೂ. ಠೇವಣಿ, ೩,೦೨೯ಲಕ್ಷ ರೂ. ಹೂಡಿಕೆಯನ್ನು ಬ್ಯಾಂಕ್ ಹೊಂದಿದ್ದು, ಒಟ್ಟು ೮೬೭.೭೩ಲಕ್ಷ ರೂ. ಆದಾಯ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ೧೪೫.೨೨ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಕಳೆದ ಎರಡು ವರ್ಷದಂತೆ ಷೇರುದಾರರಿಗೆ ಶೇ. ೧೨ರಲಾಭಾಂಶ ನೀಡುತ್ತಿದ್ದು, ಈ ವರ್ಷವೂ ಶೇ. ೧೨ರ ಲಾಭಾಂಶ ವಿತರಣೆಗೆ ಆಡಳಿತಮಂಡಳಿ ನಿರ್ಧರಿಸಿದೆ. ಇದಕ್ಕೆ ಸರ್ವಸದಸ್ಯರ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಆರ್‌ಬಿಐ ನಿರ್ದೇಶನದಂತೆ ವಿವಿಧ ವಲಯಗಳಲ್ಲಿ ೩,೦೨೯.೧೯ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ಹಿಂದಿನ ಸಾಲಿನಲ್ಲಿ ೧೩೩ಲಕ್ಷ ರೂ. ನಿವ್ವಳ ಸಾಲ ಗಳಿಸಿದ್ದು ಮುಂದಿನ ವರ್ಷ ೮೦ಕೋಟಿ ರೂ. ಠೇವಣಿ ಸಂಗ್ರಹಿಸಿ ೫೮ಕೋಟಿ ರೂ. ಸಾಲ ವಿತರಿಸಿ, ೩೨ಕೋಟಿ ರೂ. ಹೂಡಿಕೆ ಮಾಡುವ ಗುರಿಯನ್ನು ಹೊಂದಲಾಗಿದೆ. ವಿಕಲಚೇತನರು ಮತ್ತು ಅತಿ ಹಿರಿಯ ನಾಗರಿಕರಿಗೆ ವಿಶೇಷ ಸಂದರ್ಭಗಳಲ್ಲಿ ಮನೆಬಾಗಿಲಿಗೆ ಬ್ಯಾಂಕ್ ಯೋಜನೆ ರೂಪಿಸಲಾಗುತ್ತದೆ ಎಂದರು.
ಬ್ಯಾಂಕ್ ನಿರ್ದೇಶಕರಾದ ಎಚ್.ಸಿ.ಶಶಿಪ್ರಸಾದ್, ಎಂ.ವಿ.ಷಡಕ್ಷರಿ, ಪದ್ಮಾ ತಿಮ್ಮೇಗೌಡ, ಜಿ.ರಘು, ಎಂ.ಎಸ್.ಉಮೇಶ್, ಭಗವತಿ ಹರೀಶ್, ಕೆ.ಎಸ್.ಧರ್ಮರಾಜ, ಶೈಲಜಾ ಮಂಜುನಾಥ್, ಸಿ.ಆರ್.ಮಂಜು, ಕೆ.ಟಿ.ಮಂಜುನಾಥ್, ವೃತ್ತಿಪರ ನಿರ್ದೇಶಕರಾದ ಕೆ.ಡಿ.ಪುಟ್ಟಣ್ಣ, ಸಿ.ವಿ.ಹರ್ಷ, ಬ್ಯಾಂಕ್ ಸಿಇಒ ಬಿ.ವಿ.ರಾಘವೇಂದ್ರ, ಸಹಾಯಕ ಲೆಕ್ಕಿಗರಾದ ಕೆ.ಎನ್.ಅಶೋಕ, ಸಿ.ಆರ್.ಶೈಲಜಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net