

ಮೈಸೂರು: ಎಸ್‌ವಿಇಐ ಶಾಲೆ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ (ಸಿಬಿಎಸ್‌ಸಿ) ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧಿಸಿದೆ. ಪರೀಕ್ಷೆ ತೆಗೆದುಕೊಂಡಿದ್ದ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 38 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 66 ವಿದ್ಯಾರ್ಥಿಗಳ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಎ.ಮರಿಯಾ ಶಾನ್ಸಿ (ಶೇ.96.2), ಎಂ.ಎಂ.ರಾಘವ್ (ಶೇ.96.2), ಕೆ.ಎಸ್.ಭವಿಶ್ ಬೆನಕ(ಶೇ.96), ಎಸ್.ಪಿ.ಲಾವಣ್ಯ (ಶೇ.95.2), ಮನ್ವಿತ್ ಎಂ.ಘಾಟೆ( ಶೇ.94.4) ಹೆಚ್ಚಿನ ಅಂಕಗಳಿಸಿದ್ದಾರೆ. ಕೆ.ಎಸ್.ಭವಿಶ್ ಬೆನಕ ವಿಜ್ಞಾನದಲ್ಲಿ 100 ಅಂಕ ಗಳಿಸಿದ ಸಾಧನೆ ಮಾಡಿದ್ದಾನೆ.