

ಚಿಕ್ಕಮಗಳೂರು: ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ೨೪ನೇ ವರ್ಷದ ಸರ್ವಸದಸ್ಯರ ಸಭೆಯಲ್ಲಿ ಷೇರುದಾರರಿಗೆ ಶೇ. ೧೦ರಷ್ಟು ಡಿವಿಡೆಂಡ್ ಅನ್ನು ಸಂಘದ ಅಧ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಘೋಷಿಸಿದರು.
ನಗರದ ಬಸವನಹಳ್ಳಿಯ ಸಂಘದ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೨೦೦೦-೦೧ನೇ ಸಾಲಿನಲ್ಲಿ ಆರಂಭವಾದ ಈ ಸಂಘವು ಇದುವರೆವಿಗೂ ೨,೨೩೧ ಸದಸ್ಯರುಗಳನ್ನು ಹೊಂದಿದೆ. ೬೮.೨೩ ಲಕ್ಷ ಷೇರು ಹಣವನ್ನು ಹೊಂದಿದ್ದು, ೧೩.೭೫ ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ೧೦.೮೦ ಕೋಟಿ ಸಾಲ ನೀಡಿದೆ. ೨೦೨೩-೨೪ನೇ ಸಾಲಿನಲ್ಲಿ ೪೦ ಕೋಟಿ ವ್ಯವಹಾರವನ್ನು ನಡೆಸಿ, ರೂ.೧೫,೩೮,೪೫೯ ರೂ. ನಿವ್ವಳ ಲಾಭವನ್ನು ಗಳಿಸಿದೆ. ಕಳೆದ ೨೪ ವರ್ಷಗಳಿಂದಲೂ ಲಾಭದಲ್ಲಿರುವ ಸಂಘವು ಈ ವರ್ಷ ಶೇ. ೧೦ರಷ್ಟು ಡಿವಿಡೆಂಡ್ ಅನ್ನು ಷೇರುದಾರರಿಗೆ ಘೋಷಿಸಲಾಗಿದೆ ಎಂದರು.
ಸAಘದ ಆಡಳಿತ ಮಂಡಳಿಯು ಈ ಹಿಂದೆ ವಾರ್ಷಿಕ ಮಹಾಸಭೆಯಲ್ಲಿ ಭರವಸೆ ನೀಡಿದಂತೆ ೨ ವರ್ಷದೊಳಗೆ ಸ್ವಂತ ಭವ್ಯವಾದ ಕಟ್ಟಡವನ್ನು ಕಟ್ಟಿ ಅದ್ದೂರಿಯಾಗಿ ಗಣ್ಯವಕ್ತಿಗಳಿಂದ ಉದ್ಘಾಟನೆ ಮಾಡಲಾಗಿದೆ. ಈ ಮೂಲಕ ಸಂಘವು ಸ್ವಂತ ಕಟ್ಟಡದಲ್ಲಿ ಕಾರ್ಯ ಪ್ರಾರಂಭಿಸಿದೆ. ಈ ಕಟ್ಟಡವನ್ನು ಕಟ್ಟಲು ಶ್ರಮಿಸಿದ ನಮ್ಮ ಆಡಳಿತ ಮಂಡಳಿ ಮತ್ತು ಕಟ್ಟಡ ಉಪ ಸಮಿತಿಯ ಸದಸ್ಯರಿಗೆ ಅಭಿನಂದೆನಗಳನ್ನು ಸಲ್ಲಿಸುತ್ತೇನೆ. ಈ ಭವ್ಯವಾದ ಕಟ್ಟಡವನ್ನು ಕಟ್ಟಲು ಈಗಾಗಲೇ ಸುಮಾರು ೧.೨೨ ಕೋಟಿ ವ್ಯಯಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಲಿಪ್ಟ್ ಅಳವಡಿಸಿರುವ ಸೊಸೈಟಿ ಎಂದರೆ ಅದು ನಮ್ಮ ಸೊಸೈಟಿ ಎಂದು ತಿಳಿಸಿದರು.
ಸಂಘದ ವ್ಯವಸ್ಥಾಪಕ ನಾರಾಯಣ ಸ್ವಾಮಿ ೨೦೨೩-೨೪ನೇ ಸಾಲಿನ ವರದಿಯನ್ನು ಮಂಡಿಸಿ, ಲಾಭ-ನಷ್ಟಗಳ ವಿವರಣೆಯೊಂದಿಗೆ ೨೦೨೩-೨೪ನೇ ಸಾಲಿನಲ್ಲಿ ಸಂಘವು ಕನಿಷ್ಠ ೨೫೦ ಸದಸ್ಯರುಗಳನ್ನು ನೊಂದಾಯಿಸಿಕೊAಡು ಷೇರು ಬಂಡವಾಳವನ್ನು ೧ ಕೋಟಿಗೆ ಹೆಚ್ಚಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಸದಸ್ಯರಿಗೆ ಸ್ಥಿರಾಸ್ತಿ ಸಾಲವನ್ನು ೭೫ಲಕ್ಷದವರೆಗೆ ನೀಡುತ್ತಿದ್ದು, ೧೨ ಕೋಟಿಗೂ ಅಧಿಕ ಸಾಲನೀಡಿ ೨ ಕೋಟಿ ಠೇವಣಿಯನ್ನು ಸಂಗ್ರಹಿಸುವ ಗುರಿಯ ಬಗ್ಗೆ ತಿಳಿಸಿದರು.
ಸಂಘದ ನಿರ್ದೇಶಕ ಕೆ.ವೆಂಕಟೇಶ್ ಪೈ, ಯು.ಟಿ.ನಾಗರಾಜು, ಎಸ್.ವಿ. ಬಸವರಾಜಪ್ಪ, ಬಿ.ಎಚ್.ಶಂಕರ್, ಮರುಳಪ್ಪ, ಚಂದ್ರನಾಯಕ್, ಗಂಗೇಗೌಡ, ದೀಪಕ್, ಉಮೇಶ್‌ಕುಮಾರ್, ಬಿ.ಎಂ.ಸುAದರಾಜ್, ಪ್ರಶಾಂತ, ಅನುಪಮ, ಮನ್ವಿತಾ, ನಾರಾಯಣ ಮತ್ತಿತರರಿದ್ದರು.