ಶೇ. 80ರಷ್ಟು ರಸ್ತೆಗಳ ಕಾಂಕ್ರೀಟೀಕರಣ

h2-Abayya 1
Published on

ಹುಬ್ಬಳ್ಳಿ: ನೇಕಾರ ನಗರದಲ್ಲಿ ಕಳೆದ 20-30 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ನನ್ನ ಅವಧಿಯಲ್ಲಿ ಕೈಗೊಂಡಿದ್ದು, ಈಗಾಗಲೇ ಈ ಭಾಗದ ಶೇ. 80ರಷ್ಟು ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗಿದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.

ಲೋಕೋಪಯೋಗಿ ಇಲಾಖೆಯ 70 ಲಕ್ಷ ರೂ. ಅನುದಾನದಲ್ಲಿ ಕೈಗೊಂಡಿರುವ ಹಳೇ ಹುಬ್ಬಳ್ಳಿ ನೇಕಾರ ನಗರ ವೃತ್ತದಿಂದ ತಿಮ್ಮಸಾಗರ ಮುಖ್ಯರಸ್ತೆವರೆಗಿನ ಸಿಸಿ ರಸ್ತೆ ಕಾಮಗಾರಿ ಯನ್ನು ಶುಕ್ರವಾರ ಪರಿಶೀಲಿಸಿ, ಸ್ಥಳೀಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಿಮೆಂಟ್ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಸೌಲಭ್ಯ, ಬೀದಿದೀಪ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ನೇಕಾರ ನಗರ ಭಾಗದ ಬಹುತೇಕ ಬಡಾವಣೆಗಳನ್ನು ಸುಂದರವಾಗಿ ಅಭಿವೃದ್ಧಿಪಡಿಸಿದ್ದು, ನಾಲಾಕ್ಕೆ ತಡೆಗೋಡೆ ಸೇರಿದಂತೆ ಇನ್ನುಳಿದ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದರು.

ನೇಕಾರ ನಗರ ಮುಖ್ಯರಸ್ತೆ ಕಾಮಗಾರಿ ಇದೀಗ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಯುಜಿಡಿ, ಕುಡಿಯುವ ನೀರಿನ ಪೈಪ್​ಲೈನ್ ಸೇರಿದಂತೆ ಇನ್ನಿತರೆ ಕಾಮಗಾರಿ ಕೈಗೊಳ್ಳಲು ಅನುಕೂಲವಾಗುವಂತೆ ಮುಖ್ಯರಸ್ತೆಯ ಪ್ರತಿ 50 ಮೀ. ಅಂತರದಲ್ಲಿ ಪೇವರ್ಸ್ ಅಳವಡಿಸುವಂತೆ ಹಾಗೂ ರಸ್ತೆಯ ಎರಡೂ ಬದಿಯಲ್ಲಿ ಮೋರಂ ಹಾಕಿ ಒಳರಸ್ತೆಗಳ ಸಂಪರ್ಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಸೂಚಿಸಲಾಗಿದೆ ಎಂದರು.

ಪಾಲಿಕೆ ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ರಾಕೇಶ ಪಲ್ಲಾಟೆ, ಬಾಗಣ್ಣ ಬಿರಾಜದಾರ, ಕಾಶಿನಾಥ ಪವಾರ, ಶೋಭಾ ಕಮತರ, ಶಿವು ಮಡಿವಾಳರ, ಮಂಜುನಾಥ ಕಾಟಿಗರ, ಸಂಜಯ ಕಲ್ಯಾಣವರ, ಮಾರುತಿ ಗಾಯಕವಾಡ, ಪ್ರಸನ್ನ ಮಿರಜಕರ್, ಬಸವರಾಜ ಯರಿಬೈಲ್, ಸುಮಿತ್ರಾ ಕೊಪ್ಪದ, ವಸಂತಪ್ಪ ಪೂಜಾರ, ಲೋಕೋಪಯೋಗಿ ಇಲಾಖೆಯ ಶ್ರೀದೇವಿ ಧೂಪದ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net