

ಬೆಂಗಳೂರು: ಜಾಲಹಳ್ಳಿಯಲ್ಲಿ ಎಕ್ಸ್ ಪೋ ಇಂಡಿಯಾ ಇವೆಂಟ್ಸ್ ಆಂಡ್ ಎಕ್ಸಿಬಿಷನ್ಸ್ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಏರ್ಪಡಿಸಿರುವ ‘ಫರ್ನೀಚರ್-ಲೈಫ್ಸ್ಟೈಲ್ ಎಕ್ಸ್ಪೋ 2023’ಗೆ ಮೂರನೇ ದಿನವಾದ ಭಾನುವಾರವೂ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಾರಾಂತ್ಯವಾಗಿರುವುದರಿಂದ ಸಾವಿರಾರು ಮಂದಿ ಕುಟುಂಬಸಮೇತ ಎಕ್ಸ್ಪೋಗೆ ಭೇಟಿ ಕೊಟ್ಟು ತಮಗಿಷ್ಟದ ಉತ್ಪನ್ನಗಳ ಬಗ್ಗೆ ಮಳಿಗೆದಾರರಿಂದ ಮಾಹಿತಿ ಪಡೆದು, ಖರೀದಿಸಿದರು. ಜುಲೈ 9ರವರೆಗೆ ಮೇಳ ನಡೆಯಲಿದೆ.
150ಕ್ಕೂ ಹೆಚ್ಚು ಮಳಿಗೆಗಳಲ್ಲಿ ವೈವಿಧ್ಯಮಯವಾದ ವಸ್ತುಗಳಿದ್ದು, ಆಹಾರ ಉತ್ಪನ್ನ ಹಾಗೂ ಅಲಂಕಾರಿಕ ಸಾಮಗ್ರಿಗಳು ಲಭ್ಯವಿವೆ. ಒಂದೇ ಸೂರಿನಡಿ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದು.
ಸುಂದರ ಮನೆಗೆ ಬೇಕಾದ ಉತ್ತಮ ಪೀಠೋಪಕರಣಗಳು, ಒಳಾಂಗಣ ಅಲಂಕಾರಕ್ಕೆ ಬಳಸುವ ವಿವಿಧ ಬಗೆಯ ವಿನ್ಯಾಸ, ಮಾದರಿಯ ಉತ್ಪನ್ನಗಳು, ನಾನಾ ಬ್ರಾ್ಯಂಡ್ನ ಕೈಮಗ್ಗ ಹಾಗೂ ಕರಕುಶಲ ವಸ್ತುಗಳು ಲಭ್ಯವಿವೆ. ವಿಶಿಷ್ಟ ವಿನ್ಯಾಸವಿರುವ ಕಾರ್ಪೆಟ್ಗಳು, ಆಂಟಿಕ್ ವಸ್ತುಗಳು, ಖಾದಿ ಉಡುಪುಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ. ರಾಜಸ್ಥಾನದ ಜೋಧ್ಪುರದಲ್ಲಿ ತಯಾರಿಸಿರುವ ಮೆಟಲ್ ಆರ್ಟ್ ಸಾಮಾಗ್ರಿಗಳು, ಸೋಫಾ ಸೆಟ್, ಕುಶನ್ಗಳು, ಟೀಪಾಯಿ, ಕುರ್ಚಿಗಳನ್ನು ಹೊಸ ವಿನ್ಯಾಸದೊಂದಿಗೆ ತಯಾರಿಸಿದ ವಿಶಾಲವಾದ ಹಾಲ್ಗಳಲ್ಲಿ್ಲ ಪ್ರದರ್ಶಿಸಲಾಗಿದೆ.
ಗೋಡೆ ಗಡಿಯಾರ, ನೈಟ್ ಸೆಟ್ಸ್, ಬಾಗಿಲು- ಕಿಟಕಿಗಳಿಗೆ ಬಳಸಬಹುದಾದ ಅಲಂಕಾರಿಕ ಹ್ಯಾಂಗಿಂಗ್, ದೀಪದ ಗುಚ್ಛ, ಪಿಂಗಾಣಿ ಸಾಮಗ್ರಿ, ಹೆಂಗಳೆಯರಿಗೆ ಇಷ್ಟವಾಗುವ ಡ್ರೆಸ್ ಮೆಟೀರಿಯಲ್ಸ್, ರೇಷ್ಮೆ ಸೀರೆಸಹಿತ ಇತರ ಉಡುಪುಗಳು, ಟರ್ಕಿಯ ದೀಪಗಳ ಗುಚ್ಛ ಇತ್ಯಾದಿ ಸಾಮಾಗ್ರಿಗಳನ್ನು ಖರೀದಿಸ ಬಹುದಾಗಿದೆ. ಜತೆಗೆ ಡ್ರೖೆ ಫ್ರೂಟ್ಸ್, ಉತ್ತರ ಭಾರತದ ವಿವಿಧ ರಾಜ್ಯಗಳ ಉಪ್ಪಿನಕಾಯಿ, ಸಾಂಬಾರು ಪದಾರ್ಥಗಳು, ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳನ್ನು ಕೂಡ ಖರೀದಿಸಬಹುದು.
ಫರ್ನೀಚರ್ ಮೇಳದಲ್ಲಿ ಅತ್ಯಾಧುನಿಕ ಸೋಫಾ , ಡೈನಿಂಗ್ ಟೇಬಲ್, ಕರ್ಟನ್, ಟೀಪಾಯಿ, ಆಹಾರ ಉತ್ಪನ್ನ ಇತ್ಯಾದಿ ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಅಲಂಕಾರಕ್ಕೆ ಬೇಕಾದ ವಸ್ತುಗಳು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಿದ ವಿಜಯವಾಣಿ, ದಿಗ್ವಿಜಯ ವಾಹಿನಿಗೆ ಧನ್ಯವಾದಗಳು.
| ವೈ.ಬಿ.ಎಚ್. ಜಯದೇವ್ ದಾಸರಹಳ್ಳಿ
ಎಕ್ಸ್ಪೋದಲ್ಲಿ ಪ್ರತಿಯೊಂದು ವಸ್ತುಗಳಿಗೂ ಪ್ರತ್ಯೇಕ ಮಳಿಗೆಗಳಿದ್ದು, ಕಾರ್ಪೆಟ್ಸ್, ಮನೆ ಅಲಂಕಾರಿಕ ವಸ್ತುಗಳು ಹಾಗೂ ಕೇರಳದ ಸ್ಟಾಲ್ನಲ್ಲಿ ವಸ್ತು ಸಂಗ್ರಹ ಚೆನ್ನಾಗಿವೆ. ಎಲ್ಲರೂ ಒಂದು ಬಾರಿ ಭೇಟಿ ನೀಡಿ.
| ಮೇಘಾ ಎಚ್ಎಂಟಿ ಲೇಔಟ್
ಎಕ್ಸ್ಪೋದಲ್ಲಿರುವ ಎಲ್ಲ ಸ್ಟಾಲ್ಗಳು ಚೆನ್ನಾಗಿದ್ದು, ಆಕರ್ಷಕ ಬೆಲೆಯಲ್ಲಿ ವಿವಿಧ ವಸ್ತುಗಳು ಲಭ್ಯವಿವೆ. ಸೋಫಾ, ಡೈನಿಂಗ್ ಟೇಬಲ್ ಸೆಟ್ ಸೇರಿ ಫರ್ನೀಚರ್ ಖರೀದಿ ಮಾಡುವ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳಿವೆ.
| ಹರಿಪ್ರಸಾದ್ ಅಬ್ಬಿಗೇರಿ
ಎಕ್ಸ್ಪೋದಲ್ಲಿರುವ ಪೀಠೋಪಕರಣಗಳು ಚೆನ್ನಾಗಿವೆ. ವಿಭಿನ್ನ ಎಂದೆನಿಸುವ ಕೆಲವೊಂದು ವಸ್ತುಗಳಿದ್ದು, ಆಕರ್ಷಕ ಸಂಗ್ರಹ ಇವೆ.
| ನಂದಕಿಶೋರ್ ಹೆಬ್ಬಾಳ
ಎಕ್ಸ್ಪೋ ಏನು, ಎತ್ತ?
ಸ್ಥಳ: ಎಚ್ಎಂಟಿ ಮೈದಾನ, ಜಾಲಹಳ್ಳಿ (ಜಾಲಹಳ್ಳಿ ಪೊಲೀಸ್ ಠಾಣೆ ಬಳಿ)
ತೆರೆದಿರುವ ಸಮಯ: ಬೆಳಗ್ಗೆ 10.30ರಿಂದ ರಾತ್ರಿ 9. ಪ್ರವೇಶ: ಎಲ್ಲರಿಗೂ ಉಚಿತ