

ಯಲಬುರ್ಗಾ: ಶಾಸಕ ಬಸವರಾಜ ರಾಯರಡ್ಡಿ ಅವರ 67ನೇ ಜನ್ಮದಿನಾಚರಣೆ ನಿಮಿತ್ತ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ಮಾತನಾಡಿ, ರಾಯರಡ್ಡಿ ಅವರು ಆದರ್ಶ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿಗೆ ಅನೇಕ ಜನಪರ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ಅಶೋಕ ತೋಟದ, ಬಿ.ಎಂ.ಶಿರೂರು, ಹಂಪಯ್ಯಸ್ವಾಮಿ ಹಿರೇಮಠ ಮಾತನಾಡಿದರು. ರಾಯರಡ್ಡಿ ಜನ್ಮದಿನ ನಿಮಿತ್ತ ರೆಡ್‌ಕ್ರಾಸ್ ಸಂಸ್ಥೆಯಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಲಾಯಿತು.
ಇದನ್ನೂ ಓದಿ: ಬಿಜೆಪಿ ಜನಪರ ಯೋಜನೆ ಸ್ಥಗಿತ ಖಂಡನೀಯ
ಪ್ರಮುಖರಾದ ಶರಣಪ್ಪ ಗಾಂಜಿ, ಶಿವನಗೌಡ ದಾನರಡ್ಡಿ, ಹನುಮೇಶ ಕಡೆಮನಿ, ಅಶೋಕ ತೋಟದ, ಗಿರಿಜಾ ರೇವಣಪ್ಪ ಸಂಗಟಿ, ಫರಿದಾ ಬೇಗಂ, ಜಯಶ್ರೀ ಕಂದಕೂರು, ಮಲ್ಲು ಜಕ್ಕಲಿ, ಹೇಮರಡ್ಡಿ ರಡ್ಡೇರ್, ಶರಣಗೌಡ ಬಾಸಾಪುರ, ನಿಂಗಪ್ಪ ಕಮತರ, ಬಸವರಾಜ ಈಳೀಗೇರ, ಸಿದ್ದು ಪಾಟೀಲ್, ರೆಹಮನ್‌ಸಾಬ್ ನಾಯಕ್ ಇತರರಿದ್ದರು.