ರೋಟರಿಯಿಂದ ಜನಪರ ಕಾರ್ಯ

8sri-2 (1)
ಶೃಂಗೇರಿ ರೋಟರಿ ಅಧ್ಯಕ್ಷರಾಗಿ ನಿಯೋಜಿತ ಗವರ್ನರ್ ಬಿ.ಎಂ.ಭಟ್ ಅವರಿಂದ ಕೆ.ಸಿ.ನಾಗೇಶ್ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದರು. ಸುರೇಶ್ ಹೆಗಡೆ,ಪ್ರಭಾಕರ್, ಸುದರ್ಶನ್ ಇದ್ದರು.
Published on

ಶೃಂಗೇರಿ: ವಿಶ್ವದಲ್ಲಿರುವ ಲಕ್ಷಾಂತರ ರೋಟರಿ ಸದಸ್ಯರು ರೋಟರಿಗೆ ನೀಡುವ ಪ್ರತಿ ಪೈಸೆಯೂ ಸಮಾಜದ ವಿವಿಧ ಕಾರ್ಯಕ್ಕೆ ಸದ್ಬಳಕೆಯಾಗುತ್ತಿದೆ ಎಂದು ನಿಯೋಜಿತ ಗವರ್ನರ್ ಬಿ.ಎಂ.ಭಟ್ ಹೇಳಿದರು.
ಉಳವಳ್ಳಿಯ ರೈತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರೋಟರಿ ಮತ್ತು ಇನ್ನರ್‌ವ್ಹೀಲ್ ಕ್ಲಬ್ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೋಟರಿ ಕ್ಲಬ್ ಮೂಲಕ ಸ್ನೇಹಿತರನ್ನು ಪಡೆಯಬಹುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸೇವಾ ಕಾರ್ಯ ಕೈಗೊಳ್ಳಬಹುದಾಗಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದಾಗ ನಮಗೆ ಆತ್ಮತೃಪ್ತಿ ದೊರೆಯುತ್ತಿದೆ. ಇಲ್ಲಿನ ಕ್ಲಬ್ ಈ ವರ್ಷ ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿದ್ದು, ವರ್ಷವಿಡಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮನೆಮಾತಾಗಲಿ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ,ವಿಶ್ವದಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರೋಟರಿ ಕ್ಲಬ್, ಸಾಮಾಜಿಕ ಸೇವೆ ನೀಡುತ್ತಿದೆ. ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ರೋಟರಿಕ್ಲಬ್ ಕಟ್ಟಡ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 10 ಲಕ್ಷ ರೂ.ನೀಡಲಾಗುವುದು ಎಂದು ಭರವಸೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಸಿ.ನಾಗೇಶ್, ಕಾರ್ಯದರ್ಶಿ ಸುರೇಶ್ ಹೆಗ್ಡೆ ಮತ್ತು ತಂಡ ಪದವಿ ಸ್ವೀಕರಿಸಿದರು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆಯಾಗಿ ಚರಿತಾ ಸುಜನ್, ಕಾರ್ಯದರ್ಶಿಯಾಗಿ ಭೂಮಿಕಾ ಹೆಗ್ಡೆ ಪದವಿ ಸ್ವೀಕರಿಸಿದರು. ರೋಟರಿ ನೂತನ ಸದಸ್ಯರಾಗಿ ಪ್ರಭಾಕರ್, ಭಾರಧ್ವಾಜ್ ಕಾರಂತ್, ಸುದರ್ಶನ್ ಮತ್ತು ಸೌಮ್ಯ ವಿಜಯಕುಮಾರ್ ಸೇರ್ಪಡೆಗೊಂಡರು. ಜೋನಲ್ ಲೆಪ್ಟಿನೆಂಟ್ ರೇಖಾ ಉದಯಶಂಕರ್, ಕೆ.ಸಿ.ಚರಣ್, ಎನ್.ಗೌತಮ್, ಸುಧಾ ವೆಂಕಟೇಶ್, ಮಂಜುಳಾ ಸುಬ್ರಹ್ಮಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net