ಮುದ್ರಣ ಮಾಧ್ಯಮದ ಮೇಲೆ ಜನರ ವಿಶ್ವಾಸ ನಿರಂತರ

26-11-Shiva-1
ರಾಯಚೂರಿನ ಪತ್ರಿಕಾಭವನದಲ್ಲ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಐ ಪತ್ರಿಕಾ ದಿನಾಚರಣೆ ಕಾರ್ಯಕ್ರಮನ್ನು ಹಿರಿಯ ಪತ್ರಕರ್ತರ ರವೀಂದ್ರ ಭಟ್ ಉದ್ಘಾಟಿಸಿದರು. ಅಪರ ಜಿಲ್ಲಾಕಾಕಾರಿ ಡಾ.ಕೆ.ಆರ್.ದುರಗೇಶ, ರಿಪೋರ್ಟರ್ಸ್‌ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಕಾರ್ಯದರ್ಶಿ ವಿಜಯ ಜಾಗಟಗಲ್, ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾತ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಇದ್ದರು.
Published on

ರಾಯಚೂರು: ಮುದ್ರಣ ಮಾಧ್ಯಮಕ್ಕೆ ಪ್ರತಿಸ್ಪರ‌್ಯಾಗಿ ಹಲವಾರು ಮಾಧ್ಯಮಗಳು ಬರುತ್ತಿದ್ದರೂ ಮುದ್ರಣ ಮಾಧ್ಯಮದ ಮೇಲೆ ಜನರ ವಿಶ್ವಾಸ ನಿರಂತರವಾಗಿ ಮುನ್ನಡೆಯತ್ತಿದೆ. ಟಿವಿ, ಸಾಮಾಜಿಕ ಜಾಲತಾಣಗಳು ಇಂದು ಹೆಚ್ಚು ಪ್ರಚಲಿತವಾಗಿದ್ದರೂ ಪತ್ರಿಕೆಗಳ ಮೇಲೆ ಜನರ ವಿಶ್ವಾಸ ಕಡಿಮೆಯಾಗಿಲ್ಲ ಎಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ ತಿಳಿಸಿದರು.
ಸ್ಥಳೀಯ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ರಾಯಚೂರು ರಿಪೋರ್ಟರ್ಸ್‌ ಗಿಲ್ಡ್‌ನಿಂದ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮುದ್ರಣ ಮಾಧ್ಯಮ ಇಂದಿಗೂ ಜನರ ವಿಶ್ವಾಸ ಉಳಿಸಿಕೊಂಡು ಬಂದಿದೆ ಎಂದರು.
ದೇಶಕ್ಕೆ ಸ್ವಾತಂತ್ರ ಬಂದು ಏಳು ದಶಕಗಳು ಗತಿಸಿದರು ಇಂದಿಗೂ ಮಾಧ್ಯಮಕ್ಕೆ ಸಂಪೂರ್ಣ ಸ್ವಾತಂತ್ಯ ದೊರೆತಿಲ್ಲ. ಮಕ್ಕಳಿಗೆ ನಾವು ಚಿಕ್ಕಂದಿನಿಂದಲೇ ಮೊಬೈಲ್ ಕೊಡುವ ಅಭ್ಯಾಸದ ಬದಲು ಪತ್ರಿಕೆ ಮತ್ತು ಪುಸ್ತಕಗಳನ್ನು ಓದಲು ಕೊಡಬೇಕಾಗಿದೆ.
ಪತ್ರಕರ್ತರು ವಾವು ವಿದ್ವಾಂಸರು ಎನ್ನುವ ಭ್ರಮೆಯಿಂದ ಹೊರಬರಬೇಕಾಗಿದೆ. ಎಲ್ಲವೂ ತನಗೆ ಗೊತ್ತಿದೆ ಎನ್ನುವವರು ಉತ್ತಮ ಪತ್ರಕರ್ತರಾಗಲು ಸಾಧವಿಲ್ಲ. ಯಾರಿಂದ ಉತ್ತಮ, ಸ್ಪಷ್ಟ ಮಾಹಿತಿ ದೊರೆಯುತ್ತದೆ ಎಂದು ತಿಳಿದವನು ಉತ್ತಮ ಪತ್ರಕರ್ತನಾಗಿರುತ್ತಾನೆ.
ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲು ನಾಯಿ ಎಂದು ಕರೆಯಲಾಗುತ್ತಿದೆ. ಆದರೆ ಇಂದು ಆ ನಾಯಿ ಯಾರಿಗೂ ಬೊಗಳುವುದಿಲ್ಲ, ಕಚ್ಚುವುದಿಲ್ಲ. ಪತ್ರಿಕೋದ್ಯಮ ಇಂದು ಎಚ್ಚೆತ್ತುಕೊಳ್ಳಬೇಕಾದ ಸ್ಥಿತಿಯಲ್ಲಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ ಮಾತನಾಡಿ, ಪತ್ರಕರ್ತರು ಮತ್ತು ಪೊಲೀಸರು ಕರ್ತವ್ಯದಲ್ಲಿ ಸದಾ ನಿರಿತರಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಬೇಕಾಗುತ್ತದೆ. ಕೆಲಸ ಒತ್ತಡದ ನಡುವೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು.
ಪೊಲೀಸ್ ಆಡಳಿತದಿಂದ ತಾತ್ಕಾಲಿಕವಾಗಿ ಕೆಟ್ಟ ಕೆಲಸಗಳನ್ನು ತಡೆಯಬಹುದಾಗಿದೆ. ಆದರೆ ಲೇಖನಿಯಿಂದ ಸಮಾಜದಲ್ಲಿ ಬದಲಾವಣೆಯನ್ನು ತರಬಹುದಾಗಿದೆ. ಪತ್ರಕರ್ತರು ಸೇರಿದಂತೆ ಎಲ್ಲ ಕ್ಷೇತ್ರದವರಿಗೆ ಇನ್ನಿತರರೊಂದಿಗೆ ಒಡನಾಟ ಇರಬೇಕು ಆದರೆ ಅವರೊಂದಿಗೆ ಒಡನಾಡಿಗಳಾಗಬಾರದು.
ಯಾರೊಂದಿಗೆ ನಾವು ತುಂಬಾ ಹತ್ತಿರವಾದಾಗ ಸಂಬಂಧಗಳು ಋಣಗಳನ್ನು ಸೃಷ್ಟಿ ಮಾಡುತ್ತದೆ. ಸಂಬಂಧಗಳನ್ನು ಮೀರಿ ಕೆಲಸ ಮಾಡಬೇಕಾದ ಅನಿವಾರ್ಯತೆ ಪತ್ರಕರ್ತರು ಮತ್ತು ಪೊಲೀಸರಿಗಿದೆ. ಸಮಾಜದಲ್ಲಿ ಬದಲಾವಣೆ ತರುವ ಕೆಲಸವನ್ನು ಪತ್ರಕರ್ತರು ಮಾಡಬೇಕು ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಮಾಧ್ಯಮ ಇಂದು ಮಲಗುವ ಸ್ಥಿತಿಯಲ್ಲಿರಲು ವ್ಯವಸ್ಥೆಯೇ ಕಾರಣವಾಗಿದೆ. ಅದನ್ನು ಎಚ್ಚರಗೊಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಪಾಡುವಂತಹ ಪತ್ರಕರ್ತರನ್ನು ಬೆಳೆಸುವಂತ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್‌ಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ, ರಾಯಚೂರು ರಿಪೋರ್ಟರ್ಸ್‌ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ, ಕಾರ್ಯದರ್ಶಿ ವಿಜಯ ಜಾಗಟಗಲ್, ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net