ಜನರ ಕಷ್ಟಗಳಿಗೆ ಪೊಲೀಸ್ ಇಲಾಖೆ ಸ್ಪಂದನೆ: ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಹೇಳಿಕೆ

Bellari Police Flag Day
ಬಳ್ಳಾರಿಯ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಪಥಸಂಚಲನ ನಡೆಸಿದರು.
Published on

ಬಳ್ಳಾರಿ: ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಪೊಲೀಸ್ ಇಲಾಖೆಯಿಂದ ಆಗುತ್ತಿದೆ ಎಂದು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡಸ್ವಾಮಿ ಹೇಳಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಜಿಲ್ಲಾ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾತನಾಡಿದರು. ಪೊಲೀಸರಿಗೆ ಸವಾಜದಲ್ಲಿ ಗೌರವವಿದೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸವಾಗಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಪೊಲೀಸ್ ಇಲಾಖೆಗೆ ಬಾವುಟದ ಹಬ್ಬ, ಮತ್ತೊಂದು ಬಾವುಟ ಬಾನೆತ್ತರಕ್ಕೆ ಹಾರಲೆಂದು ಹೋರಾಡಿ ಮಡಿದ ಹುತಾತ್ಮರ ದಿನಾಚರಣೆ. ಇವೆರಡು ಬಹುಮುಖ್ಯ ಹಬ್ಬವಾಗಿದ್ದು ಇಲಾಖೆ ಸಿಬ್ಬಂದಿ ತಪ್ಪದೆ ಭಾಗವಹಿಸಬೇಕು ಎಂದರು.

ಎಸ್ಪಿ ಸೈದುಲು ಅದಾವತ್ ವಾತಾನಾಡಿ, ಪೊಲೀಸ್ ಧ್ವಜ ಮಾರಾಟದಿಂದ ಬರುವ ಶೇ.50 ಹಣವನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಗೆ ನೀಡಲಾಗುವುದು ಎಂದು ತಿಳಿಸಿದರು. ನಿವೃತ್ತ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಚ್.ನಾಗರಾಜ್ ವಾತನಾಡಿದರು. ಎಎಸ್ಪಿ ಬಿ.ಎನ್.ಲಾವಣ್ಯ ವಂದಿಸಿದರು. ಜಿಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ನಿವೃತ್ತ ಅಧಿಕಾರಿಗಳಿಗೆ ಸನ್ಮಾನ: ನಿವೃತ್ತರಾದ 9 ಪಿಎಸ್‌ಐ, 18 ಎಎಸ್‌ಐ, ಒಬ್ಬ ಮಹಿಳಾ ಎಎಸ್‌ಐ, ನಾಲ್ವರು ಹೆಡ್ ಕಾನ್ ಸ್ಟೇಬಲ್, 6 ಎಆರ್‌ಎಸ್‌ಐ, ಇಬ್ಬರು ಎಎಚ್‌ಸಿ ಅಧಿಕಾರಿ ಸೇರಿ ಒಟ್ಟು 40 ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net