ಜನರ ಸಮಸ್ಯೆ ಆಲಿಸಲು ಸಂಪರ್ಕ ಕಚೇರಿ ನಿರ್ಮಾಣ - ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಹೇಳಿಕೆ

050820 Kampli People Contact Office Bhoomi Pooja
ಕಂಪ್ಲಿಯಲ್ಲಿ ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಜನ ಸಂಪರ್ಕ ಕಚೇರಿ ಮತ್ತು ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
Published on

ಕಂಪ್ಲಿ: ಅಡ್ವಾನಿ ಹಾಗೂ ಮೋದಿ ಅವರ ಸಂಕಲ್ಪದಿಂದ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿದೆ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶ್‌ಬಾಬು ಹೇಳಿದರು.

ಪಟ್ಟಣದ ಕಮ್ಮವಾರಿ ಸಂಘದ ಬಳಿ ಜನ ಸಂಪರ್ಕ ಕಚೇರಿ ಹಾಗೂ ಗೃಹ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಕಂಪ್ಲಿ ಹಾಗೂ ಕುರುಗೋಡು ಭಾಗದ ಜನರ ಸಮಸ್ಯೆ ಆಲಿಸಲು ಕಚೇರಿ ತೆರಯಲಾಗಿದೆ. ಜತೆಗೆ ಚುನಾವಣೆ ಎದುರಿಸಲು ಕಾರ್ಯಕರ್ತರು ಉತ್ಸಾಹದಲ್ಲಿರುವುದರಿಂದ ಪಕ್ಷ ಸಂಘಟನೆ, ಬಲವರ್ಧನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ರಾಜ್ಯ ಹಾಗೂ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ಕಂಪ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಪ್ರಮುಖರಾದ ಟಿ.ಎಚ್.ದೀಪಾ ಸುರೇಶ್‌ಬಾಬು, ಬೇಸೇಜ್ ರೆಡ್ಡಿ, ಯರ‌್ರಂಗಳ್ಳಿ ತಿಮ್ಮಾರೆಡ್ಡಿ, ಅಳ್ಳಳ್ಳಿ ವೀರೇಶ್, ಎನ್.ಪುರುಷೋತ್ತಮ, ಪಿ.ಬ್ರಹ್ಮಯ್ಯ, ವಿ.ಎಲ್.ಬಾಬು, ಜಿ.ಸುಧಾಕರ, ಎನ್.ಚಂದ್ರಕಾಂತರೆಡ್ಡಿ, ಸಿ.ಆರ್.ಹನುಮಂತ, ಬಿ.ಎಸ್.ಶಿವಮೂರ್ತಿ, ಎಸ್.ಎಂ.ನಾಗರಾಜ, ಕೊಡಿದಲರಾಜು, ವಿ.ವಿದ್ಯಾಧರ, ಜಿ.ಲಿಂಗನಗೌಡ, ಎಚ್.ಎಂ.ಲಿಂಗನಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net