ಹಸಿರು ಪಟಾಕಿಯತ್ತ ಜನರ ಒಲವು

13
Published on

ಮೈಸೂರು: ನಗರದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬದಲ್ಲಿ ಮುಖ್ಯವಾಗಿ ಬಳಸುವ ಪಟಾಕಿ ವ್ಯಾಪಾರ ಜೋರಾಗಿ ನಡೆದಿದೆ. ಜತೆಗೆ ಗ್ರಾಹಕರು ಹಸಿರು ಪಟಾಕಿಗೆ ಹೆಚ್ಚಿನ ಒತ್ತು ನೀಡಿರುವುದು ವಿಶೇಷ.

ಕಳೆದ ಎರಡು ವರ್ಷದ ಹಿಂದೆ ಗ್ರೀನ್ ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರಿಂದ ಕಡಿಮೆ ರಾಸಾಯನಿಕ ಬಳಕೆ ಮಾಡಿರುವ ಹಾಗೂ ಹೆಚ್ಚು ಶಬ್ಧ ಮಾಡದ ಪಟಾಕಿಗಳು ಮಾರುಕಟ್ಟೆಗೆ ಆಗಮಿಸಿವೆ. ಗ್ರಾಹಕರೂ ಹಸಿರು ಪಟಾಕಿ ಖರೀದಿಗೆ ಒತ್ತು ನೀಡಿದ್ದಾರೆ.

ಜಾಗೃತಿಯ ಫಲವಾಗಿ ಕಳೆದ ಮೂರು ವರ್ಷಗಳಿಂದ ಜನರೇ ಹಸಿರು ಪಟಾಕಿಗಳನ್ನು ಮಾರುಕಟ್ಟೆಯಲ್ಲಿ ಕೇಳುತ್ತಿದ್ದು, ಆಕಾಶಬುಟ್ಟಿ, ಕಲರ್‌ಫುಲ್, ಸೌಂಡ್‌ಲೆಸ್ ಪಟಾಕಿಗಳಿಗೆ ಬೇಡಿಕೆ ಹೆಚ್ಚಿದೆ. ಫ್ಲವರ್ ಪಾಟ್, ಕೃಷ್ಣಚಕ್ರ, ಸುರ್‌ಸುರ್ ಬತ್ತಿಯಂಥ ಪಟಾಕಿಗಳನ್ನೇ ವಿಶೇಷವಾಗಿ ಗಿಫ್ಟ್ ಪ್ಯಾಕ್ ರೂಪದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಇತ್ತೀಚೆಗೆ ಆಕಾಶಬುಟ್ಟಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿಯೂ ಬಣ್ಣ ಬಣ್ಣದ ಆಕಾಶಬುಟ್ಟಿಗಳು ರಾರಾಜಿಸುತ್ತಿವೆ.

ಮೈಸೂರಿನಲ್ಲಿ ಜೆ.ಕೆ. ಮೈದಾನದಲ್ಲಿ 11 ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಇದಲ್ಲದೆ ಚಾಮುಂಡಿಪುರಂ ವೃತ್ತ, ಬಲ್ಲಾಳ್ ವೃತ್ತ, ರಾಮಕೃಷ್ಣ ನಗರ, ವಿವೇಕಾನಂದ ನಗರ ಸೇರಿದಂತೆ ನಾನಾ ಬಡಾವಣೆಗಳಲ್ಲಿ ಒಟ್ಟು 60 ಕಡೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net