ಜನಪರ ಯೋಜನೆಗಳ ಅರಿವು ಮೂಡಿಸಿ; ಕೂಡ್ಲಿಗಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಸುಗುಣಾ ಸಲಹೆ

Kudligi BJP Tq Morcha
ಕೂಡ್ಲಿಗಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ಮೋರ್ಚಾದ ಜಿಲ್ಲಾ ಪ್ರ.ಕಾರ್ಯದರ್ಶಿ ಕೆ.ಸುಗುಣಾ ಉದ್ಘಾಟಿಸಿದರು.
Published on

ಕೂಡ್ಲಿಗಿ: ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಕುರಿತು ಬೂತ್‌ಮಟ್ಟದಲ್ಲಿ ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಸುಗುಣಾ ಹೇಳಿದರು.

ಪಟ್ಟಣದ ಅಶ್ವಮೇಧ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತಾನಾಡಿದರು. ಕಳೆದ ಏಳು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ. ಅವುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವುದು ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಕರೊನಾ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂದು ಜಾಗೃತಿ ಮೂಡಿಸಬೇಕು. ಈಗಾಗಲೇ ದೇಶದೆಲ್ಲೆಡೆ ಲಸಿಕೆ ಸಿಗುತ್ತಿದ್ದು, ಆತಂಕ ಪಡುವುದು ಬೇಡ ಎಂದು ತಿಳಿಸುವಂತೆ ಸಲಹೆ ನೀಡಿದರು.

ಈಗಾಗಲೇ ಮೂರನೇ ಅಲೆ ಆರಂಭವಾಗುತ್ತಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲು ಪಾಲಕರಿಗೆ ತಿಳಿಸುವ ಕೆಲಸವಾಗಬೇಕು. ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಯಿತು. ಆದ್ದರಿಂದ ಪ್ರತಿಯೊಬ್ಬರೂ ಶುದ್ಧ ಗಾಳಿಗೆ ಮಹತ್ವ ನೀಡಬೇಕಿದ್ದು, ಮನೆಗಳ ಮುಂದೆ ಸಸಿನೆಟ್ಟು ಸುಂದರ ಪರಿಸರಕ್ಕೆ ಆದ್ಯತೆ ನೀಡಲು ಅರಿವು ಮೂಡಿಸಬೇಕು ಎಂದರು. ಮೋರ್ಚಾದ ತಾಲೂಕು ಅಧ್ಯಕ್ಷೆ ಎಲ್.ಪವಿತ್ರ ಮಾತಾನಾಡಿದರು. ಪ್ರಮುಖರಾದ ಪಿ.ಮಂಜುನಾಥ್ ನಾಯಕ, ಗೀತಾ, ಶೋಭಾ, ಕಾಳಿಬಾಯಿ, ನಿಂಗಮ್ಮ, ರೇಖಾ, ಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net