

ಲಕ್ಷ್ಮೇಶ್ವರ: ಸೆ.15ರಿಂದ ಅ.2ರ ವರೆಗೆ ಸ್ವಚ್ಛತಾ ಹಿ ಸೇವಾ ಅಭಿಯಾನ ಹಮ್ಮಿಕೊಂಡು ಐತಿಹಾಸಿಕ, ಪಾರಂಪರಿಕ ತಾಣಗಳು, ದೇವಸ್ಥಾನಗಳು ಸೇರಿ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದ್ದು ಅದಕ್ಕೆ ಸಾರ್ವಜನಿಕರ ಸಹಭಾಗಿತ್ವವೂ ಅವಶ್ಯವಾಗಿದೆ ಎಂದು ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದರು.
ಪಟ್ಟಣದ ಸೋಮೇಶ್ವರ ದೇವಸ್ಥಾನ, ಜೈನ ಬಸದಿ, ಲಕ್ಷ್ಮೀ ಲಿಂಗನ ದೇವಸ್ಥಾನದಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯದಲ್ಲಿ ಅವರು ಮಾತನಾಡಿದರು.
ದೇವಸ್ಥಾನ, ಸ್ಮಾರಕ, ನದಿಪಾತ್ರ, ಅರಣ್ಯ, ಕೆರೆ, ಉದ್ಯಾನ, ನಿಲ್ದಾಣಗಳು ಸಾರ್ವಜನಿಕರ ಸಂಪತ್ತಾಗಿವೆ. ಈ ಸ್ಥಳದಲ್ಲಿ ಸ್ವಚ್ಛತೆ, ಶುಚಿತ್ವ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಪುರಸಭೆ ಮ್ಯಾನೇಜರ್ ಮಂಜುಳಾ ಹೂಗಾರ, ಪರಿಸರ ಇಂಜಿನಿಯರ್ ಮಂಜುನಾಥ ಮುದಗಲ್, ಹನಮಂತ ನಂದೆಣ್ಣವರ ಇತರರಿದ್ದರು.