ಜನರ ಪ್ರೀತಿಯೇ ದೊಡ್ಡ ಪ್ರಶಸ್ತಿ

umashree
Published on

ಕೋಲಾರ: ರಂಗಭೂಮಿಯ ಸಾಂಸತಿಕ ಜಗತ್ತಿನಲ್ಲಿ ಪಿಚ್ಚಳ್ಳಿ ಶ್ರೀನಿವಾಸ್​ ತನ್ನದೇ ಛಾಪು ಮೂಡಿಸಿದ್ದು, ಜನರ ಪ್ರೀತಿಯೆಂಬ ದೊಡ್ಡ ಪ್ರಶಸ್ತಿಗೆ ಭಾಜನವಾಗಿರುವ ಕಲಾವಿದ, ಗಾಯಕರಾಗಿದ್ದಾರೆ ಎಂದು ಚಿತ್ರನಟಿ ಉಮಾಶ್ರೀ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ರಾಜ್ಯೋತ್ಸವ ಪ್ರಶಸ್ತಿ ಪುರಸತ, ಸಂಗೀತ ನಿರ್ದೇಶಕ, ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್​ ಅವರಿಗೆ ಹೋರಾಟದ ಹಾಡುಗಾರರ ಬಳಗದಿಂದ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಸಾಂಸತಿಕ ಕ್ಷೇತ್ರದ ಜನರ ಜತೆಗೆ ನಮಗಾಗಿ ಅವರು, ಅವರಿಗಾಗಿ ನಾವು ಎಂಬಂತೆ ಬೆಸೆದುಕೊಂಡಿರುವ ಪಿಚ್ಚಳ್ಳಿ ಶ್ರೀನಿವಾಸ್​ ಅವರಿಗೆ ರಾಜ್ಯೋತ್ಸವ, ಅಕಾಡೆಮಿ ಹೀಗೆ ಅನೇಕ ಪ್ರಶಸ್ತಿಗಳು ದೊರಕಿದ್ದರೂ ಜನರ ಪ್ರೀತಿ ಪ್ರಶಸ್ತಿಯೇ ದೊಡ್ಡದು ಎಂಬುದು ತಮ್ಮ ಭಾವನೆ ಎಂದರು.

ಜಾನಪದ ಅಭಿಲಾಷೆಯೊಂದಿಗೆ ನಟನಾಗಲು ಬಂದು ರಂಗಚಟುವಟಿಕೆಗಳಲ್ಲಿ ಸಂಪೂರ್ಣ ತೊಡಗಿಸಿ ಹೆಸರು ಮಾಡಿರುವ ಅವರು ಅನೇಕ ವಿಚಾರಗಳನ್ನು ತಿಳಿದುಕೊಳ್ಳುವ ಆಸಕ್ತಿಯ ಜತೆಗೆ ಉಳ್ಳವರ ಮುಂದೆ ಇಲ್ಲದವರು ಸೆಟೆದುನಿಂತು ಸಮನಾಗಿ ಬದುಕು, ಸಾಗಿಸಬೇಕೆಂಬ ಹೋರಾಟ ಧ್ಯೇಯ ಹೊಂದಿರುವ ಕಲಾವಿದ ಎಂದು ಬಣ್ಣಿಸಿದರು.

ನೇರವಾದ ನುಡಿ, ಜನಪರ ಚಿಂತನೆ, ಹೋರಾಟ ಅವರನ್ನು ಎಲ್ಲರೂ ಪ್ರೀತಿಸುವಂತೆ ಮಾಡಿದೆ. ಅವರನ್ನು ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವ ಸಂದರ್ಭದಲ್ಲಿ ನಾವೆಲ್ಲರೂ ಹರಸಲು ಬಂದಿಲ್ಲ, ಸಂಭ್ರಮಿಸಲು ಬಂದಿದ್ದೇವೆ ಎಂದರು.

ಕೋಲಾರ ಜಿಲ್ಲೆಯ ಕುಗ್ರಾಮ ಪಿಚ್ಚಳ್ಳಿಯಿಂದ ದಲಿತ ಹೋರಾಟದ ಹಿನ್ನೆಲೆಯಿಂದ ರಂಗಾಯಣಕ್ಕೆ ನೂರಾರು ಅಭ್ಯರ್ಥಿಗಳ ನಡುವೆ ಆಯ್ಕೆಗೊಂಡು ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಿರುವ ಪಿಚ್ಚಳ್ಳಿ ಶ್ರೀನಿವಾಸ್​ ನಮಗೆ ಆಪ್ತ ರಂಗಕರ್ಮಿ ಸ್ನೇಹಿತ ಎಂದು ತಮ್ಮ ಅವರ ಸ್ನೇಹದ ಕುರಿತು ನಟ ಮಂಡ್ಯ ರಮೇಶ್​ ಮೆಲುಕು ಹಾಕಿದರು.

ಜಿಲ್ಲಾ ಕಾಂಗ್ರೆಸ್​ ಮತ್ತು ಸಾರಂಗರಂಗ ಅಧ್ಯಕ್ಷ ಲಕ್ಷಿ ನಾರಾಯಣ, ಕರ್ನಾಟಕ ದಲಿತ ಕ್ರಿಯಾ ಸಮಿತಿ ರಾಜ್ಯ ಸಂಚಾಲಕ ಡಾ.ಎಂ.ಚಂದ್ರಶೇಖರ್​, ನಾಟಕರಾದ ಕುಪ್ಪಣ್ಣ ಅವರು ಪಿಚ್ಚಳ್ಳಿ ಕುರಿತು ಮಾತನಾಡಿದರು.

ಪಿಚ್ಚಳ್ಳಿ ಶ್ರೀನಿವಾಸ್​ ಅವರ ವಿವಿಧ ಆಯಾಮಗಳ ಕುರಿತು ಕಾರ್ಯಾಗಾರ ಮತ್ತು ಸಂವಾದ ಜರುಗಿತು. ಪಿಚ್ಚಳ್ಳಿ ಶ್ರೀನಿವಾಸ್​ ಸಂಗ್ರಹಿಸಿರುವ ಹೋರಾಟದ ಹಾಡುಗಳ ಪುಸ್ತಕ ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ ಇತರರು ಇದ್ದರು.

ವಿಶ್ವದ ಸಾಂಸತಿಕ ಲೋಕದಲ್ಲಿ ಪ್ರಜ್ವಲಿಸಲಿ ಪಿಚ್ಚಳ್ಳಿ ಶ್ರೀನಿವಾಸ್​ ಹೋರಾಟದ ಹಾಡುಗಾರನಾಗಿ ಬಂದು ಸಮುದಾಯದ ಮೂಲಕ ಗಾಯಕರಾಗಿ ರೂಪುಗೊಂಡು, ರಂಗಾಯಣದ ನಂಟಿನಿಂದ ರಂಗಕರ್ಮಿಯಾಗಿ ಸಾಗಿ ಬಂದಿದ್ದಾರೆ. ಮೈಕೆಲ್​ ಜಾಕ್ಸನ್​ರಂತೆ ವಿಶ್ವದ ಸಾಂಸತಿಕ ಲೋಕದಲ್ಲಿ ಮೇರು ಶಿಖರವೇರವಾಗಿ ಪಿಚ್ಚಳ್ಳಿ ಶ್ರೀನಿವಾಸ್​ ಅವರನ್ನು ಕಾಣಬೇಕಾಗಿದೆ. ಈ ಕುರಿತು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net