ಸಹಕಾರ ರಂಗದಿಂದ ಜನರ ಬದುಕು ಹಸನು

ಎಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳಿ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಚಾ.ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೇರಿದಂತೆ ಇತರೆ ಸಹಕಾರ ಸಂಘಗಳು ಮತ್ತು ಒಕ್ಕೂಟದ ವತಿಯಿಂದ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಚಲುವರಾಜು ಹಾಗೂ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಎಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳಿ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಚಾ.ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೇರಿದಂತೆ ಇತರೆ ಸಹಕಾರ ಸಂಘಗಳು ಮತ್ತು ಒಕ್ಕೂಟದ ವತಿಯಿಂದ ನಡೆದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಚಲುವರಾಜು ಹಾಗೂ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.
Published on

ಎಚ್.ಡಿ.ಕೋಟೆ: ಜನಸಾಮಾನ್ಯರ ಬದುಕು ಅಸನುಗೊಳಿಸಲು ಸಹಕಾರ ಸಂಘಗಳು ಕೆಲಸ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಚಲುವರಾಜು ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಂಡಳಿ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟ, ಮೈಸೂರು ಚಾ.ನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೇರಿದಂತೆ ಇತರೆ ಸಹಕಾರ ಸಂಘಗಳು ಮತ್ತು ಒಕ್ಕೂಟದ ವತಿಯಿಂದ ಆಯೋಜಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಹಕಾರ ರಂಗ ರೈತರ ಬದುಕಿಗೆ ಜೀವನಾಡಿಯಾಗಿ, ಉದ್ಯೋಗ ಹರಿಸಿ ಬಂದ ಯುವಕರಿಗೆ ಕಾಮದೇನಿನಂತೆ ಕೈ ಹಿಡಿದಿದೆ. ತಾಲೂಕಿನ ಪ್ರತಿ ಗ್ರಾಮದಲ್ಲಿ ಸಹಕಾರ ಸಂಘಗಳಿವೆ. ಮಹಿಳೆಯರು ಹಂತಹಂತವಾಗಿ ಪ್ರಮುಖ ಕಸುಬಾಗಿ ಹೈನುಗಾರಿಕೆ ಮಾಡುತ್ತಿದ್ದಾರೆ. ನಗರದಲ್ಲಿ ಇದ್ದ ಯುವಕರು ಗ್ರಾಮಕ್ಕೆ ಬಂದು ಹಸುಗಳನ್ನು ಸಾಕಿಕೊಂಡು ಉದ್ಯೋಗ ಕಟ್ಟಿಕೊಂಡಿದ್ದಾರೆ. ನಮ್ಮ ದೇಶ ಸೇರಿದಂತೆ ಹೊರದೇಶಗಳಲ್ಲಿ ನಂದಿನಿ ಉತ್ಪನ್ನಗಳೂ ಮಾರಾಟ ಆಗಲು ಸಹಕಾರಿ ಬಂಧುಗಳ ನೆರವು ಅಪಾರ ಎಂದರು.

ರೈತರು ಎಲ್ಲಾ ಬೆಳೆಗಳನ್ನು ಬೆಳೆಯುತ್ತಾರೆ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಸಹಕಾರ ಸಂಘದ ಸದಸ್ಯರು ಹೈನುಗಾರಿಕೆ ಮೂಲಕ ಹಾಲು ಮಾರಾಟದಲ್ಲಿ ನಷ್ಟ ಅನುಭವಿಸದೆ ಲಾಭದಲ್ಲಿ ಇದ್ದಾರೆ. ಜಿಲ್ಲಾ ಹಾಲು ಒಕ್ಕೂಟ ತಮಿಳುನಾಡಿಲ್ಲಿಯೂ ಮಾರಟ ಮಳಿಗೆ ಆರಂಭಿಸಲಿದೆ ಎಂದು ತಿಳಿಸಿದರು.

ಶಾಸಕ ಅನಿಲ್ ಕುಮಾರ್ ಮಾತನಾಡಿ, ನಮ್ಮ ಜೆಎಲ್‌ಆರ್ ಜತೆ ಮೈಮುಲ್ ಒಪ್ಪಂದ ಮಾಡಿಕೊಂಡದ್ದೇ ಆದಲ್ಲಿ ನಂದಿನಿ ಉತ್ಪನ್ನಗಳನ್ನು ನಮ್ಮ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗಳಲ್ಲಿ ಬಳಸಬಹುದು. ನಮ್ಮ ಜೆಎಲ್‌ಆರ್‌ನ ಎಲ್ಲಾ ಬ್ರಾಂಚ್‌ಗಳಿಂದ ಸುಮಾರು 1000 ಲೀಟರ್‌ಗೂ ಹೆಚ್ಚಿನ ಹಾಲು ಅಗತ್ಯವಿದ್ದು, ಒಪ್ಪಂದದಿಂದ ಮೈಮುಲ್‌ಗೂ ಸಹ ಲಾಭದಾಯಕವಾಗಲಿದೆ ಎಂದರು.

ಅವಿಭಜಿತ ಎಚ್.ಡಿ.ಕೋಟೆ ತಾಲೂಕಿನಲ್ಲಿ ಕಳೆದ 20 ವರ್ಷದ ಹಿಂದೆ ಕೇವಲ 16 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದವು. ಈಗ 180 ಕ್ಕೆ ಏರಿದೆ ಎಂದರು.ರಾಷ್ಟ್ರದಲ್ಲಿ ಎಂಟು ಕೋಟಿ ಸಹಕಾರ ಸಂಘಗಳಿದ್ದು, 30 ಸಾವಿರ ಕೋಟಿಯ ವಹಿವಾಟು ನಡೆಯುತ್ತಿದೆ ಎಂದರು.

ಸಹಕಾರ ಯೂನಿಯನ್ ಉಪಾಧ್ಯಕ್ಷ ಸದಾನಂದ, ಸಹಕಾರ ಯೂನಿಯನ್ ನನಿರ್ದೇಶಕ ಭೈರಪ್ಪ, ಮೈಮುಲ್ ನಿರ್ದೇಶಕರಾದ ಶಿವಗಾಮಿ, ಈರೇಗೌಡ, ನೀಲಾಂಬಿಕಾ ಮಹೇಶ್, ಲೀಲಾ ನಾಗರಾಜು, ಮಲ್ಲಿಕಾ ರವಿಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ರೇಣುಕಾ, ಪಿ.ರವಿ, ಪಿಎಲ್‌ಡಿ ಬ್ಯಾಂಕ್ ವ್ಯವಸ್ಥಾಪಕಿ ಜಯಮ್ಮ ಮಹದೇವಪ್ಪ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾಯಕ್, ಸಕಲೇಶ್, ಮೊತ್ತ ಬಸವರಾಜು, ಎಂಡಿಸಿಸಿ ಬ್ಯಾಂಕ್ ವಿಸ್ತರಣಾಧಿಕಾರಿ ಚಂದ್ರಶೇಖರ್, ಆರಿಫ್ ಇಕ್ಬಾಲ್, ರಾಮಪ್ಪ ಬಾರ್ಕಿ, ಮಾನಸ ಗಂಗೋತ್ರಿ ಡಾ. ರಾಮಕೃಷ್ಣ, ಜಿನ್ನಹಳ್ಳಿ ರಾಜನಾಯಕ, ಮರಳೂರನಾಯಕ, ಕ್ಯಾತನಹಳ್ಳಿ ನಾಗರಾಜು, ಕೆಂಡಗಣ್ಣೇಗೌಡ ಇತರರು ಇದ್ದರು. ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಪ್ರಪಂಚದ ಬೆಳವಣಿಗೆಯಲ್ಲಿ ಭಾರತದ ಪಾತ್ರ ಮುಂಚೂಣಿಗೆ ತೆರಳಬೇಕಾದ ಅನಿವಾರ್ಯತೆ ಇರುವುದರಿಂದ ಸಹಕಾರ ಕ್ಷೇತ್ರ ಅಗತ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net