ಅಪಾಯದಲ್ಲಿ ಜನರ ಜೀವನ

ಅಪಾಯದಲ್ಲಿ ಜನರ ಜೀವನ
Published on

ಶನಿವಾರಸಂತೆ: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಜನ ಜೀವನ ಅಪಾಯ ಎದುರಿಸುವಂತಾಗಿದೆ.

ಶನಿವಾರಸಂತೆ-ಕುಶಾಲನಗರ ಹೆದ್ದಾರಿಯ ಮಾಲಂಬಿ-ಕಣಿವೆ ಬಸವನಹಳ್ಳಿ ಗ್ರಾಮದ ಸಮೀಪ ಶುಕ್ರವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಡಕುಂಟಾಯಿತು. ವಿದ್ಯುತ್ ತಂತಿ ತುಂಡಾಗಿ ಮೂರು ಕಂಬಗಳು ಮುರಿದಿವೆ. ಕಾಫಿ ಬೆಳೆಗಾರ ಎನ್.ಬಿ.ನಾಗಪ್ಪ ಅವರ ಮನೆ ಮುಂಭಾಗದ ತಡೆಗೋಡೆ ಮತ್ತು ಕೊಟ್ಟಿಗೆಗೆ ಮರದ ಕೊಂಬೆಗಳು ತಗುಲಿದೆ.

ಸಮೀಪದಲ್ಲೇ ವಿದ್ಯುತ್ ಲೇನ್ ಸರಿಪಡಿಸುತ್ತಿದ್ದ ಸೆಸ್ಕ್ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಸಿಬ್ಬಂದಿಯ ಕಾರಿಗೆ ಹಾನಿ ಉಂಟಾಗಿದೆ. ಸೆಸ್ಕ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು. ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net