ಜನರ ಮನರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ

Sirguppa Cultural Program
ಕೆ.ತಾಂಡಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ವೇಳೆ ಕೃಷಿ ವಿಜ್ಞಾನಿ ಡಾ.ಚಂದ್ರನಾಯ್ಕ, ಕೃಷಿ ಅಧಿಕಾರಿ ಹೇಮ್ಲಾ ನಾಯ್ಕ, ಪ್ರಮುಖರಾದ ಕಟ್ಟೆಮನೆ ಸ್ವಾಮಿ ನಾಯ್ಕ, ಬಿ ಈರಣ್ಣ, ಲಕ್ಷ್ಮಣ ನಾಯ್ಕ ಇತರರಿದ್ದರು.
Published on

ಸಿರಗುಪ್ಪ: ಶ್ರೀ ಸೇವಾಲಾಲ್ ಮತ್ತು ಮಾರಿಕಾಂಬಾ ದೇವಿ ಜಾತ್ರೋತ್ಸವ ನಿಮಿತ್ತ ತಾಲೂಕಿನ ಕೆ.ತಾಂಡಾ ಗ್ರಾಮದಲ್ಲಿ ಬುಧವಾರ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಲಾವಿದೆ ಮಯೂರಿ ಬಸವರಾಜ್ ಕುಚೂಪುಡಿ ನೃತ್ಯ,ಕೆ.ಕಾಳಿದಾಸ ಮತ್ತು ಸಂದೀಪ್ ಬಳ್ಳಾರಿ ಅವರ ಮ್ಯಾಜಿಕ್ ಶೋ ಜನರನ್ನು ಮನರಂಜಿಸಿತು.

ಕೃಷಿ ವಿಜ್ಞಾನಿ ಡಾ.ಚಂದ್ರನಾಯ್ಕ, ಕೃಷಿ ಅಧಿಕಾರಿ ಹೇಮ್ಲಾ ನಾಯ್ಕ, ಪ್ರಮುಖರಾದ ಕಟ್ಟೆಮನೆ ಸ್ವಾಮಿ ನಾಯ್ಕ, ಬಿ ಈರಣ್ಣ, ವೆಂಕಟೇಶ್ ನಾಯ್ಕ ಎಲ್, ಬಾಲಾಜಿ ನಾಯ್ಕ, ಲಕ್ಷ್ಮಣ ನಾಯ್ಕ, ನಾರಾಯಣ, ದೊಡ್ಡಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net