ಹೆಸ್ಕಾಂ ಕಾರ್ಯವೈಖರಿಗೆ ಜನರ ಮೆಚ್ಚುಗೆ

People's appreciation for Hescom's work
ತುಳಸಿಗೇರಿಯಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸುತ್ತಿರುವ ಹೆಸ್ಕಾಂ ಸಿಬ್ಬಂದಿ.
Published on


ಕಲಾದಗಿ: ಗುರುವಾರ ಸಂಜೆ ಏಕಾಏಕಿ ಬಿರುಗಾಳಿಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದು ವಿದ್ಯುತ್ ಕಡಿತಗೊಂಡು ಸಂಪೂರ್ಣ ಕತ್ತಲಲ್ಲಿ ಮುಳುಗಿದ್ದ ತುಳಸಿಗೇರಿ, ಸೊಕನಾದಗಿ, ದೇವನಾಳ, ದೇವನಾಳ ಆರ್.ಸಿ. ಗ್ರಾಮಗಳಲ್ಲಿ ತ್ವರಿತವಾಗಿ ಬೆಳಕು ನೀಡಿದ ಹೆಸ್ಕಾಂ ಸಿಬ್ಬಂದಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿರುಗಾಳಿಯಿಂದಾಗಿ ಈ ಗ್ರಾಮಗಳ ವ್ಯಾಪ್ತಿಯಲ್ಲಿ 120 ಕಂಬಗಳು, 13 ಟೀಸಿಗಳು ಹಾಗೂ 15 ಕಿಮೀ ಉದ್ದದ ವಿದ್ಯುತ್ ತಂತಿ ಹರದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಶುಕ್ರವಾರ ಬೆಳಗ್ಗೆ ತುಳಸಿಗೇರಿಗೆ ಧಾವಿಸಿದ ಹೆಸ್ಕಾಂ ಅಧಿಕಾರಿಗಳು, ನೂರಾರು ಸಿಬ್ಬಂದಿ ಸಮರೋಪಾದಿಯಲ್ಲಿ ಕಾರ್ಯ ಕೈಗೊಂಡು ವಿದ್ಯುತ್ ಕಂಬ, ತಂತಿ ಸರಿಪಡಿಸಿ ಸಂಜೆ ವೇಳೆಗೆ ವಿದ್ಯುತ್ ಪೂರೈಸಿದ್ದಾರೆ.

ಹೆಸ್ಕಾಂಗೆ ಭಾರೀ ನಷ್ಟ

ಕೆಲ ಕಾಲದವರೆಗೆ ಬೀಸಿದ ಬಿರುಗಾಳಿಯಿಂದಾಗಿ ಅಂದಾಜು ಹೆಸ್ಕಾಂಗೆ 20 ರಿಂದ 25 ಲಕ್ಷ ರೂಗಳಷ್ಟು ನಷ್ಟವಾಗಿದ್ದು, ಈ ಪ್ರಮಾಣದಲ್ಲಿ ನಷ್ಟವಾಗಿದ್ದು ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲು ಎನ್ನುತ್ತಾರೆ ಕಲಾದಗಿ ಹೆಸ್ಕಾಂ ಶಾಖಾಧಿಕಾರಿ ಜಿ.ಎಚ್. ಛಬ್ಬಿ.

ಹೆಸ್ಕಾಂನ ಇಇ ಸಲೀಂ ಅಹ್ಮದ್, ಎಇಇ ಅರವಿಂದ ನಾಯಕ ಸ್ಥಳಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ ಸಿಬ್ಬಂದಿಗೆ ಅಗತ್ಯ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net