

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ಅರಬೈಲ್ ಬಳಿಯ ಫಣಸಗುಳಿ ಸೇತುವೆಯ ಮಟ್ಟದಲ್ಲಿ ಗಂಗಾವಳಿ ನದಿ ನೀರು ಹರಿಯುತ್ತಿದೆ. ಸೋಮವಾರ ತಹಸೀಲ್ದಾರ ಅಶೋಕ ಭಟ್ಟ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೇತುವೆಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಮಳೆ ಹೆಚ್ಚಾಗಿ ಸೇತುವೆಯ ಮೇಲೆ ನೀರು ಹರಿಯಲು ಆರಂಭಿಸಿದರೆ ಈ ಮಾರ್ಗ ಸಂಚಾರ ಸ್ಥಗಿತಗೊಳಿಸಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದರು. ಆರ್ ಎಫ್ ಒ ಶಿಲ್ಪಾ ನಾಯ್ಕ, ಪಿಡಿಒ ಚೆನ್ನವೀರ ಕುಂಬಾರ, ಅರಣ್ಯ ಇಲಾಖೆ ಹಾಗೂ ಗ್ರಾ.ಪಂ ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.
ಕಾರವಾರ: ಜಿಲ್ಲೆಯಲ್ಲಿ ಮಳೆ ಮತ್ತು ಬಿಸಿಲಿನ ವಾತಾವರಣ ಇರಲಿದೆ. ಜುಲೈ 2 ಹಾಗೂ 3 ರಂದು ಯೆಲ್ಲೋ ಅಲರ್ಟ್ ಇದ್ದು, 4 ಹಾಗೂ 5 ರಂದು ಮಳೆ ಸ್ವಲ್ಪ ಚುರುಕಾಗಲಿದೆ ಎಂದು ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ನೀಡಿದೆ.
ಸೋಮವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳ ಅವಽಯಲ್ಲಿ ಅಂಕೋಲಾ-39, ಭಟ್ಕಳ-32.2, ಹಳಿಯಾಳ-5.6, ಹೊನ್ನಾವರ-39.2, ಕಾರವಾರ-52.1, ಕುಮಟಾ-27.3, ಮುಂಡಗೋಡ-12.3, ಸಿದ್ದಾಪುರ-56, ಶಿರಸಿ-47.3, ಜೊಯಿಡಾ-34.2, ಯಲ್ಲಾಪುರ-43.2, ದಾಂಡೇಲಿ-14.8 ಮಿಮೀ ಮಳೆಯಾಗಿದೆ.