ಜನಪದ ಸಂಸ್ಕೃತಿ ಉಳಿಯಲಿ

Published on

ಗಂಗಾವತಿ: ತಂತ್ರಜ್ಞಾನ ಭರಾಟೆಯಲ್ಲಿ ಮೂಲ ಜನಪದ ಸಂಸ್ಕೃತಿ ನಶಿಸಿಹೋಗುತ್ತಿದ್ದು ಇಂದಿನ ಮಕ್ಕಳು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕ್ರೀಯಾಶೀಲರಾಗಬೇಕಿದೆ ಎಂದು ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷೆ ಸಿ.ಮಹಾಲಕ್ಷ್ಮೀ ಹೇಳಿದರು.

ನಗರದ ಯಾತ್ರಿ ನಿವಾಸದಲ್ಲಿ ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯಿಂದ ಚಿಗುರು ಚೈತನ್ಯ ಬೇಸಿಗೆ ಶಿಬಿರದಲ್ಲಿ ಹಮ್ಮಿಕೊಂಡ ಜಾನಪದ ಕಲೆ ಸಂರಕ್ಷಣೆ ಕುರಿತು ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು. ಜಾನಪದ ಕಲೆಯ ವೈಶಿಷ್ಟ್ಯ, ಮೇರು ಸಾಹಿತ್ಯ, ಗಾಯನ ಮತ್ತು ಸಾಹಿತ್ಯದ ದಾಖಲೀಕರಣ, ಕೃಷಿ ಸಲಕರಣೆಗಳಾದ ನೇಗಿಲು, ಕುಂಟೆ, ರಂಟೆ, ಹಂತಿ ಗುಂಡು, ಮತ್ತು ಬೀಸುವ ಕಲ್ಲು, ಒರಳು , ಉಪಯೋಗಿಸುವ ರೀತಿ, ಎತ್ತು, ಎಮ್ಮೆ,ಹಸು, ಅವುಗಳ ಉಪಯೋಗದ ಕುರಿತು ಮಾಹಿತಿ ನೀಡಲಾಯಿತು. ಟ್ರಸ್ಟ್ ಸದಸ್ಯ ಕೆ.ಚನ್ನಬಸಯ್ಯ ಸ್ವಾಮಿ, ಸಂಪನ್ಮೂಲ ಶಿಕ್ಷಕರಾದ ನಾಗನಗೌಡ, ಮಾಲಾಶ್ರೀಧರ್, ಮೈಲಾರಪ್ಪ ಬೂದಿಹಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net