ಮೀಸಲು ಅರಣ್ಯದಲ್ಲಿ ಶಸ್ತ್ರಧಾರಿಗಳು: ಕಾರ್ಕಳದ ಕೆರ್ವಾಶೆಯಲ್ಲಿ ಪತ್ತೆ

Forest 31 dec 19
Published on

ಕಾರ್ಕಳ: ತಾಲೂಕಿನ ಕೆರ್ವಾಶೆ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಶಸ್ತ್ರಧಾರಿಗಳಿಬ್ಬರು ಕಾಣ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಿಂಗಳೀಕ ಗಣತಿಗಾಗಿ ಕೆರ್ವಾಶೆ ದೇವರಗುಂಡಿ ಎಂಬಲ್ಲಿ ಕಾರ್ಕಳ ವನ್ಯಜೀವಿ ವಲಯ ಉಪವಲಯ ಅರಣ್ಯಾಧಿಕಾರಿ ಶಿವಾನಂದ ಸದಪ್ಪೆ ಎಂಬುವರು ಬೇಟೆ ನಿಯಂತ್ರಣ ಕಾವಲುಗಾರ ಹರೀಶ್ ಕುಮಾರ್ ಎಂಬುವವರೊಂದಿಗೆ ಅರಣ್ಯದೊಳಗೆ ಹೋಗುತ್ತಿದ್ದಾಗ ದೇವರಗುಂಡಿ ಪ್ರದೇಶ ವ್ಯಾಪ್ತಿಯಲ್ಲಿ ಇಬ್ಬರು ಕಂಡಿದ್ದಾರೆ. ಅವರಲ್ಲಿ ಓರ್ವ ಕೋವಿ ಹಿಡಿದುಕೊಂಡಿದ್ದ. ಅರಣ್ಯ ಸಿಬ್ಬಂದಿಯನ್ನು ಕಂಡೊಂಡನೆ ಇಬ್ಬರೂ ಅರಣ್ಯದೊಳಗೆ ಓಡಿ ತಲೆಮರೆಸಿಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಕೋವಿಗೆ ಬಳಸುವ ಮದ್ದುಗುಂಡುಗಳು, ಚಪ್ಪಲಿಗಳು, ಮೊಬೈಲ್ ಫೋನ್ ಪತ್ತೆಯಾಗಿವೆ. ಈ ಕುರಿತು ಕೇಸು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net