ಕರುಣೆಯ ಗೋಡೆಗೆ ಕರುಣೆ ತೋರದ ಜನ, ಬಡವರ ನೆರವಿಗೆ ಆರಂಭಗೊಂಡ ಸೇವಾ ಕಾರ್ಯಕ್ಕೆ ಹಲವು ತೊಡಕು

3dbp1(KaruneyagodeStory)
Published on

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ

ಬಡವರು, ನಿರ್ಗತಿಕರು, ಭಿಕ್ಷುಕರು, ವೃದ್ಧರು ಹಾಗೂ ಅಂಗವಿಲಕರಿಗೆ ನೆರವು ಒದಗಿಸಲು ಆರಂಭವಾಗಿದ್ದ ಕರುಣೆಯ ಗೋಡೆ ಈಗ ಆಟೋ ನಿಲ್ದಾಣ ಹಾಗೂ ಹೋಟೆಲ್ ಆಗಿ ಪರಿವರ್ತನೆಯಾಗಿದೆ. ದಾನಿಗಳು ನೆರವು ನೀಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಕರುಣೆಯ ಗೋಡೆಯ ಉದ್ದೇಶವೇ ಬುಡಮೇಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಲಾಕ್‌ಡೌನ್ ವೇಳೆ ದೊಡ್ಡಬಳ್ಳಾಪುರ ನಗರದ ಬಸ್ ನಿಲ್ದಾಣದ ಬಳಿ ಜಾಗ ಗುರುತಿಸಿ ಅದಕ್ಕೆ ಕರುಣೆಯ ಗೋಡೆ ಎಂಬ ಹೆಸರು ನೀಡಿ, ಅಗತ್ಯ ವಸ್ತುಗಳನ್ನು ಇಡುವ ಹಾಗೂ ಅಗತ್ಯವಿದ್ದವರು ಪಡೆದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದು ಆಹಾರ, ಬಟ್ಟೆ, ಹೊದಿಕೆ, ನೀರು ನೀಡುತ್ತಿದ್ದರು. ಈಗ ಕರುಣೆಯ ಗೋಡೆ ಚಿತ್ರಣ ಬದಲಾಗಿದೆ.

ಈ ಸ್ಥಳದಲ್ಲಿ ಹಗಲು ವೇಳೆ ಆಟೋಗಳು ನಿಲ್ಲುತ್ತಿವೆ. ರಾತ್ರಿ ವೇಳೆ ತಳ್ಳುಗಾಡಿಯಲ್ಲಿ ಹೋಟೆಲ್ ಆರಂಭವಾಗಿದೆ. ಇದರಿಂದ ಕರುಣೆಯ ಗೋಡೆ ಬಳಿಗೆ ಬಂದು ಯಾರೂ ನೆರವು ಒದಗಿಸುತ್ತಿಲ್ಲ.

ಕರುಣೆಯ ಗೋಡೆ ದುರ್ಬಳಕೆಯಾಗಲು ಬಿಡುವುದಿಲ್ಲ. ಸದ್ಯ ಅಲ್ಲಿನ ಅವ್ಯವಸ್ಥೆ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಆಟೋ ಚಾಲಕರು ಹಾಗೂ ರಾತ್ರಿ ವೇಳೆ ಹೋಟೆಲ್ ಹಾಕುವವರಿಗೆ ಎಚ್ಚರಿಕೆ ನೀಡಿ. ಕರುಣೆಯ ಗೋಡೆಯನ್ನು ಸುವ್ಯವಸ್ಥೆ ಮಾಡಿ ಅನುಕೂಲ ಮಾಡಿಕೊಡಲಾಗುವುದು. ಎಂ.ಬಿ ನವೀನ್ ಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್, ದೊಡ್ಡಬಳ್ಳಾಪುರ ಬಡ, ನಿರ್ಗತಿಕರಿಗೆ ನೆರವಾಗುವ ಒಳ್ಳೆಯ ಉದ್ದೇಶದಿಂದ ಆರಂಭಗೊಂಡ ಕರುಣೆಯ ಗೋಡೆ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪೊಲೀಸ್ ಸಿಬ್ಬಂದಿ ನಿತ್ಯ ಗಮನಿಸಬೇಕಿದೆ. ಇದನ್ನು ನಿರ್ವಹಣೆ ಮಾಡುವಲ್ಲಿ ಸಾರ್ವಜನಿಕರ ಜವಾಬ್ದಾರಿ ಇದೆ. ಒಳ್ಳೆ ಕೆಲಸ ವಿಫಲವಾಗದಂತೆ ನೋಡಿಕೊಳ್ಳಬೇಕಿದೆ. ರಾಜಘಟ್ಟ ರವಿ, ಸ್ಥಳೀಯ ನಿವಾಸಿ, ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net