ಅಂಬೂರು ಮೀನು ಖರೀದಿಗೆ ಮುಗಿಬಿದ್ದ ಜನತೆ

fish
ಚಿಕ್ಕಮಗಳೂರು ಮೀನು ಮಾರಾಟಗಾರ ತಂದ 340 ಕೆ.ಜಿ ತೂಕದ ಬೃಹತ್ ಗಾತ್ರದ ಸಮುದ್ರದ ಅಂಬೂರು ಮೀನನ್ನು ಸಾರ್ವಜನಿಕರು ನೋಡುತ್ತಿರುವುದು.
Published on

ಚಿಕ್ಕಮಗಳೂರು: ಮೀನು ಮಾರಾಟಗಾರ 340 ಕೆ.ಜಿ ತೂಕದ ಬೃಹತ್ ಗಾತ್ರದ ಸಮುದ್ರ ಮೀನು ಮಂಗಳೂರಿನಿಂದ ಭಾನುವಾರ ತಂದಿದ್ದು, ಇದನ್ನು ನೋಡಿದ ಗ್ರಾಹಕರು ಅಚ್ಚರಿಗೊಂಡಿದ್ದಾರೆ.

ಉಪ್ಪಳ್ಳಿ ಬಡಾವಣೆಯಲ್ಲಿರುವ ಮೀನಿನ ಅಂಗಡಿಗೆ ಅಂಬೂರು ಮೀನನ್ನು ತಂದಿದ್ದು, ಇದನ್ನು ನೋಡಲು ಅಂಗಡಿ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸೌದಿ ಅರೇಬಿಯಾದಲ್ಲಿ ಈ ಮೀನಿಗೆ ಹೆಚ್ಚು ಬೇಡಿಕೆ ಇದೆ. ಬೃಹತ್ ಗಾತ್ರದ ಅಂಬೂರು ಮೀನನ್ನು ಮೊದಲ ಬಾರಿಗೆ ಮೀನು ಮಾರಾಟಗಾರ ತರಿಸಿದ್ದಾರೆ.
ಸಮುದ್ರದ ಅಂಬೂರು ಮೀನು 1 ಕೆ.ಜಿ. ಮಾಂಸಕ್ಕೆ 1 ಸಾವಿರ ರೂಪಾಯಿಗೂ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತದೆ. ಅಂಬೂರು ಮೀನು ಸಿಗುವುದೇ ಅಪರೂಪ. ಸದ್ಯ ಅಂಬೂರು ಮೀನು ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net