ಕೂದಲಿಗೆ ತಮ್ಮಿಷ್ಟದ ಬಣ್ಣ ಹಚ್ಚಿಸಿಕೊಂಡ ಜನತೆ

SRP_07-01jpj
ಶ್ರೀರಂಗಪಟ್ಟಣದ ಶ್ರೀರಂಗನಾಯಕಿ ಸ್ತ್ರೀ ಸಮಾಜದಲ್ಲಿ ಬುಧವಾರ ವಿಜಯವಾಣಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಗಾರ್ನಿಯರ್ ಹೇರ್ ಕಲರ್ ಕಾರ್ಯಕ್ರಮದಲ್ಲಿ ಮಹಿಳೆಯರು ತಲೆಕೂದಲಿಗೆ ಬಣ್ಣ ಹಚ್ಚಿಸಿಕೊಂಡರು.
Published on

ಶ್ರೀರಂಗಪಟ್ಟಣ : ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಗಾರ್ನಿಯರ್ ಹೇರ್‌ಕಲರಿಂಗ್ ಉಚಿತ ಅಭಿಯಾನ ಕ್ಷೇತ್ರದ ಜನರ ಮನಸೆಳೆಯಿತು.
ಪಟ್ಟಣದ ಅಂಚೆತಿಪ್ಪಯ್ಯ ರಸ್ತೆಯಲ್ಲಿರುವ ಶ್ರೀ ರಂಗನಾಯಕಿ ಮಹಿಳಾ ಸಮಾಜದ ಕಟ್ಟಡದಲ್ಲಿ ಬೆಳಗ್ಗೆ 10.30ರಿಂದ ಸಂಜೆ 6 ರವರೆಗೆ ನಡೆದ ಒಂದು ದಿನದ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಮಹಿಳೆಯರು ಹಾಗೂ ಪುರುಷರು ನೂರಾರು ಸಂಖ್ಯೆಯಲ್ಲಿ ನಿರೀಕ್ಷೆಗೂ ಮೀರಿ ಆಗಮಿಸಿ ತಲೆ ಕೂದಲಿಗೆ ತಮ್ಮಿಷ್ಟದ ಬಣ್ಣ ಹಚ್ಚಿಸಿಕೊಂಡು ಸಂತಸಪಟ್ಟರು.
ಸಮಾಜದಲ್ಲಿ ರೈತಾಪಿ ಜನರು, ಶೋಷಿತ ವರ್ಗ ಹಾಗೂ ಜನಸಾಮಾನ್ಯರ ಸಮಸ್ಯೆಗಳ ಮೇಲೆ ಜನಪರ ಕಾಳಜಿಯಿಂದ ಬೆಳಕು ಚೆಲ್ಲಿ ರಾಜ್ಯದ ಜನರ ಪರವಾಗಿ ಗಟ್ಟಿ ದನಿ ಎತ್ತುವ ವಿಜಯವಾಣಿ ಪತ್ರಿಕೆ ನಾಡಿನ ಓದುಗರ ವಿಶ್ವಾಸ ಸಂಪಾದಿಸಿದ್ದು, ಪತ್ರಿಕಾರಂಗದ ಸುದ್ದಿ ಮಾಧ್ಯಮದಲ್ಲಿ ಉನ್ನತ ಸಾಧನೆಗಳಿಸಿದೆ ಎಂದು ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಶ್ರೀರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ, ಖಜಾಂಚಿ ವಿಶಾಲಾಕ್ಷಿ, ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷೆ ಲಯನ್ ಸರಸ್ವತಿ, ಮಹಿಳಾ ಸಾಂತ್ವನ ಸಮಿತಿ ಅಧ್ಯಕ್ಷೆ ಶೀಲಾ ನಂಜುಂಡಯ್ಯ, ಸದಸ್ಯೆ ಶೋಭಾ, ಕ್ಯಾತನಹಳ್ಳಿ ವೆಂಕಟೇಗೌಡ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಕೆ.ವೈ.ಶ್ರೀನಿವಾಸ್ ಸೇರಿದಂತೆ ಹಲವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಜತೆಗೆ ತಾವೂ ಕೂಡ ಬಣ್ಣ ಹಾಕಿಸಿಕೊಂಡು ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net