ನದಿ ದಡಕ್ಕೆ ಬಂದ ಬೃಹತ್ ಮೊಸಳೆ ಕಂಡು ಹೌಹಾರಿದ ಜನತೆ!

14Goa4 MOSALE
Published on

ಪಣಜಿ: ಗೋವಾ ಬಿಚೋಲಿ ನದಿಯ ದಡದಲ್ಲಿ ದೊಡ್ಡ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ.


ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ಮೊಸಳೆ ಕಾಣಿಸಿಕೊಂಡಿದೆ.

ಈ ಹಿಂದೆ ಇದೇ ಪ್ರದೇಶದಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದವು. ಬಿಚೋಲಿಯ ನದಿ ದಡ ಪ್ರದೇಶವು ಜನರು ಓಡಾಡುವ ಸ್ಥಳವಾಗಿದೆ.

ಇದೀಗ ದೊಡ್ಡ ಮೊಸಳೆ ಈ ನದಿಯ ದಡದಲ್ಲಿ ಪ್ರತ್ಯಕ್ಷವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net