ಜನರನ್ನು ಹಸಿವಿನಿಂದ ಬಳಲಲು ಬಿಡಲಿಲ್ಲ

joshi prachaar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಭರವಸೆಯಂತೆ ಪಡಿತರದಾರರಿಗೆ 10 ಕೆಜಿ ಅಕ್ಕಿ ಕೊಡದೇ ಇದ್ದರೂ ಜನ ಹಸಿವಿನಿಂದ ಬಳಲು ಕೇಂದ್ರ ಸರ್ಕಾರ ಬಿಡಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಶುವಿನಹಾಳ, ಹಿರೇಮಲ್ಲೂರ, ಹನುಮನಹಳ್ಳಿ ಮತ್ತು ವನಹಳ್ಳಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಸಿವುಮುಕ್ತ ಕರ್ನಾಟಕ ಮಾಡುತ್ತೇವೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದೆಲ್ಲಾ ಗ್ಯಾರಂಟಿ ಘೊಷಣೆ ಮಾಡಿದ ಕಾಂಗ್ರೆಸ್ ಜನಕ್ಕೆ ಕೈ ಕೊಟ್ಟಿತು. ಆದರೆ ನಿಜವಾಗಿ ಹಸಿವು ನೀಗಿಸಿದ್ದು ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಎಂದು ಪ್ರತಿಪಾದಿಸಿದರು.

ಸದ್ಯದ ಬರ ಪರಿಸ್ಥಿತಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರವೊಂದರಲ್ಲೇ ಸುಮಾರು 15 ಲಕ್ಷ ಫಲಾನುಭವಿಗಳಿಗೆ ಗರೀಬ್ ಕಲ್ಯಾಣ ಅನ್ನ ಯೋಜನೆ ಆಸರೆಯಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಜನರ ಹಸಿವು ನೀಗಿಸುವಲ್ಲಿ ನಿಜವಾದ ಕಾಳಜಿ ತೋರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಡವರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಪ್ರಮುಖರಾದ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡೀಗೌಡರ, ಶಶಿಧರ ಯಲಿಗಾರ, ತಿಪ್ಪಣ್ಣ ಸಾತಣ್ಣವರ, ಪ್ರಸಾದ ಸುರಗಿಮಠ, ರವಿ ಕುಡೊಕ್ಕಲಿಗಾರ , ಬಸವರಾಜ ನಾರಾಯಣಪುರ , ಶ್ರೀಕಾಂತ ಬುಳ್ಳಕ್ಕನವರ, ದೇವಣ್ಣ ಚಾಕಲಬ್ಬಿ, ಶಂಕರ ಪೊಲೀಸ್ ಗೌಡ್ರು, ಹೊನ್ನಪ್ಪ ಹೂಗಾರ, ಸೋಮಯ್ಯ ಗೌರಿಮಠ, ಅರ್ಜುನ ಹಂಚಿನಮನಿ ಹಾಗು ಪಕ್ಷದ ಪ್ರಮುಖರು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net