

ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ
ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಹಲವು ಸಾಧನೆಗಳ ಮೂಲಕ ಈ ಭಾಗದ ಜನರಿಗೆ ಕೀರ್ತಿ ತಂದಿದೆ. ಶೇ.100 ಸಾಲ ಮರುಪಾವತಿ ಮಾಡುವ ಮೂಲಕ ಇಲ್ಲಿಯ ಜನರು ಸಂಘದ ಬೆಂಬಲಕ್ಕೆ ನಿಂತಿದ್ದಾರೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು.
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಿರಾಡಿ ಶಾಖೆಯ ನೂತನ ಕಟ್ಟಡ ಕಲ್ಪತರು ಸಹಕಾರಿ ಸೌಧ ಹಾಗೂ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ ಎಸ್.ಬಿ ಭದ್ರತಾ ಕೊಠಡಿ ಉದ್ಘಾಟಿಸಿದರು. ನ್ಯಾಯಬೆಲೆ ಅಂಗಡಿಯನ್ನು ಮಂಗಳೂರು ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್., ಕ್ಯಾಂಪ್ಕೋ ಖರೀದಿ ಕೇಂದ್ರವನ್ನು ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ, ರಸಗೊಬ್ಬರ ಗೋದಾಮು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಉದ್ಘಾಟಿಸಿದರು.
ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ರಘು ಎಸ್.ಎಂ. ಉಪಸ್ಥಿತರಿದ್ದರು. ನೆಲ್ಯಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್, ಸಹಕಾರ ಸೌಧಕ್ಕೆ ಜಾಗ ನೀಡಿದ ಅಶೋಕ್, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ, ನಿರ್ದೇಶಕರಾದ ಜಯಾನಂದ ಪಿ, ಬಾಲಕೃಷ್ಣ ಬಿ, ಸರ್ವೋತ್ತಮ ಗೌಡ, ಪ್ರಶಾಂತ ರೈ, ಸುದರ್ಶನ್, ವಸಂತ ಎಸ್, ಹಣಕಾಸು ಪೂರೈಕೆ ಸಂಸ್ಥೆಯ ಪ್ರತಿನಿಧಿ ಉಷಾ ಅಂಚನ್, ಸುಲೋಚನಾ ಡಿ, ಅಣ್ಣು ಬಿ, ಸುಮಿತ್ರಾ, ಗುರುರಾಜ ಭಟ್, ಸದಸ್ಯರು, ಸಿಬ್ಬಂದಿ ರತ್ನಾಕರ ಪಿ, ರಮೇಶ್ ನಾಯ್ಕ, ಮಹೇಶ್ ಎಂ.ಟಿ, ಅನೀಷ್ ಕೆ.ಜೆ, ಅಶೋಕ್, ಸಂದೀಪ್ ಕುಮಾರ್, ಮುಕುಂದ ಪ್ರಸಾದ್ ಎಸ್, ರೋಶನ್ ಕುಮಾರ್ ಬಿ. ಜೆ, ವಿಶ್ವನಾಥ ಕೆ, ಧನುಷ್ ಜೆ, ಪ್ರಜ್ಞಾ ಬಿ, ವನಿತಾ ಡಿ, ನಾಗೇಶ್ ಪಿ, ತಾರನಾಥ, ಪ್ರಮೋದ್ ಎಂ, ವಸಂತ ಕೆ, ರಘುನಾಥ ಕೆ. ಸಹಕರಿಸಿದರು.
ಲಹರಿ ಸಂಗೀತ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಜಯಾನಂದ ಬಂಟ್ರಿಯಾಲ್ ಸ್ವಾಗತಿಸಿದರು. ನಿರ್ದೇಶಕ ಬಾಲಕೃಷ್ಣ ಬಾಣಜಾಲ್ ವಂದಿಸಿದರು. ನಿವೃತ್ತ ಶಿಕ್ಷಕ ರವೀಂದ್ರ ಟಿ. ಕಾರ್ಯಕ್ರಮ ನಿರೂಪಿಸಿದರು.
39 ವರ್ಷಗಳಿಂದ ಸಂಘ ಮುನ್ನಡೆಸುತ್ತಿರುವ ಅಧ್ಯಕ್ಷ ಉಮೇಶ್ ಶೆಟ್ಟಿ ಪಟ್ಟೆ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಹಕಾರಿ ಸಂಘದ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಜಯರಾಮ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು, ಮಾಸ್ಟರ್ ಪ್ಲಾನರಿಯ ಪ್ರಭಾಕರ ಭಟ್, ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ಕಟ್ಟಡಕ್ಕೆ ಜಾಗ ನೀಡಿದ ಅಶೋಕ್, ರಘು ಎಸ್.ಎಂ, ಸಂಘದ ಹಿರಿಯ ಸದಸ್ಯ ಜೋಸೆಫ್ ಕೆ.ಕೆ ಅವರನ್ನು ಗೌರವಿಸಲಾಯಿತು.
30 ಕಿ.ಮೀ. ವ್ಯಾಪ್ತಿ ಹೊಂದಿದ ಏಳು ಕಂದಾಯ ಗ್ರಾಮಗಳನ್ನು ಆವರಿಸಿದ ಸಂಘ ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಎಂಬುವುದು ಹೆಗ್ಗಳಿಕೆಯ ವಿಷಯ. ಕಳೆದ 39 ವರ್ಷಗಳಿಂದ ಈ ಸಂಘದ ಸಾರಥ್ಯ ಹೊಂದಿರುವ ಉಮೇಶ್ ಶೆಟ್ಟಿ ಪಟ್ಟೆ ಅವರ ಕಾರ್ಯ ಅಭಿನಂದನೀಯ. ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ
ಶಶಿಕುಮಾರ್ ರೈ ಬಾಲ್ಯೊಟ್ಟು, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ