ಜಿಲ್ಲೆಯ ರಕ್ಷಣೆಗಾಗಿ ಜನತೆ ಒಂದಾಗಬೇಕು: ಸಿ.ಪಿ.ಮುತ್ತಣ್ಣ

c.p.mutthanna
Published on

ಮಡಿಕೇರಿ: ಕೊಡಗಿನಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಹೆಚ್ಚಾಗಿದ್ದು, ಜಿಲ್ಲೆಯ ರಕ್ಷಣೆಗಾಗಿ ಜಿಲ್ಲೆಯ ಜನತೆ ಒಂದಾಗಬೇಕು ಎಂದು ಕೊಡಗು ಮತ್ತು ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ಹಾಗೂ ನಿವೃತ್ತ ಕರ್ನಲ್ ಸಿ.ಪಿ.ಮುತ್ತಣ್ಣ ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎಗ್ಗಿಲ್ಲದೇ ರೆಸಾರ್ಟ್, ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆಯಾಗುತ್ತಿದೆ. ಜಮ್ಮಾ ಬಾಣೆ ಜಮೀನು, ಕಾಫಿ ಎಸ್ಟೇಟ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಲಾಗದಿದ್ದರೂ ಕೊಡಗಿನಲ್ಲಿ ವಾಣಿಜ್ಯ ಯೋಜನೆಗಳು ಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇದು ಭವಿಷ್ಯದಲ್ಲಿ ಜಿಲ್ಲೆಗೆ ಅಪಾಯವಾಗಿದೆ. ಅಲ್ಲದೇ ಜಲನಯದ ಪ್ರದೇಶದ ಮೇಲೆ ಒತ್ತಡ ಹಾಕುತ್ತಿರುವ ಪ್ರಸಂಗಗಳು ನಡೆಯುತ್ತಿರುವುದು ಆಘಾತಕಾರಿ ಬೆಳವಳಿಗೆಯಾಗಿದ್ದು, ಜಿಲ್ಲೆಯ ರಕ್ಷಣೆ ಜಿಲ್ಲೆಯ ಪ್ರತಿಯೊಬ್ಬ ನಾಗರಿಕನ ಜವಬ್ದಾರಿಯಾಗಬೇಕು ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಕೆದಕಲ್ ಗ್ರಾಮ ಪಂಚಾಯಿತಿ ಸದಸ್ಯ ಮೇದೂರು ಶಿವಶಂಕರ್, ಕೊಡಗು ರಕ್ಷಣಾ ವೇದಿಕೆ ಉಪಾಧ್ಯಕ್ಷ ಗೋಪಿನಾಥ್ ಕೆದಕಲ್, ಶಾನ್ ಬೋಪಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net