

ಬೋರಗಾಂವ: ವಿವಿಧ ಸಾಲ ಯೋಜನೆ ಹಾಗೂ ಠೇವಣಿ ಲಾಭ ಪಡೆಯಬೇಕು ಎಂದು ಅನ್ನಪೂರ್ಣೇಶ್ವರಿ ಸೊಸೈಟಿ ಸಂಸ್ಥಾಪಕ, ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಸಮೀಪದ ಸದಲಗಾ ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅನ್ನಪೂರ್ಣೇಶ್ವರಿ ಕೋ-ಆಪ್ ಕ್ರೆಡಿಟ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ಕಬ್ಬೂರ, ನಾಗರಮುನ್ನೋಳಿ, ಚಿಕ್ಕೋಡಿ, ಸಂಕೇಶ್ವರ ಸೇರಿ 6 ಶಾಖೆ ಪ್ರಾರಂಭಿಸಲಾಗುವುದು ಎಂದರು.
ಸರ್ಕಾರವು ಹೊಸ ಜಿಲ್ಲೆಗಳನ್ನು ಘೋಷಿಸಲಿದ್ದು, ಚಿಕ್ಕೋಡಿಯೂ ಸೇರ್ಪಡೆಯಾಗಲಿದೆ. ಸದಲಗಾ ತಾಲೂಕು ಆಗಲಿದೆ ಎಂದರು. ಅಧ್ಯಕ್ಷ ಬಾಬಣ್ಣ ಶಮನಶೆಟ್ಟಿ ಮಾತನಾಡಿ, ಸಂಸ್ಥೆ 3017 ಸದಸ್ಯರು, 32.83 ಲಕ್ಷ ರೂ. ಷೇರು ಬಂಡವಾಳ, 75.85 ಲಕ್ಷ ರೂ. ನಿಶಿ, 34.06 ಕೋಟಿ ರೂ. ಠೇವಣಿ ಸಂಗ್ರಹಿಸಿ 19.88 ಕೋಟಿ ರೂ. ಸಾಲ ವಿತರಿಸಿದೆ. 34.64 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದರು.
ವ್ಯವಸ್ಥಾಪಕ ಬಿ.ಕೆ.ಕಾಡಾಪುರ ಮಾತನಾಡಿ, ಸದಸ್ಯರಿಗೆ ಶೇ.10 ಲಾಭಾಂಶ ನೀಡಲಾಗುವುದು ಎಂದರು. ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಗುಂಡಕಲ್ಲೆ, ಸಬೇದ ಜೋಶಿ, ಬಸವರಾಜ ಪಾಟೀಲ, ಸುರೇಶ ಚೌಗುಲಾ, ಮಹಾದೇವ ಮಧಾಳೆ, ಸತೀಶ ಪಾಟೀಲ, ರಮೇಶ ದೇಸಾಯಿ, ತಮ್ಮಣ್ಣ ಕಮತೆ, ಸುನೀಲ ತೋರಗಲ, ಹೊನಗೊಂಡ ಪಾಟೀಲ, ಲಕ್ಷ್ಮಣ ಸಂಕಾಜೆ, ಸಂತೋಷ ನವಲೆ, ಭೀಮಾ ಮಾಳಗೆ, ರಣಜಿತ ಪಾಟೀಲ, ಸುಮೇರು ಪಾಟೀಲ, ಬಸವರಾಜ ಪಾಟೀಲ, ಸಚಿನ ಬಿಂದಗೆ, ಅಭಯ ಪಾಟೀಲ ಇದ್ದರು.