

ಮಂಡ್ಯ : ಶನಿವಾರ ಸಂಜೆ ಕಿಕ್ಕೇರಿ ವ್ಯಾಪ್ತಿಯಲ್ಲಿ ಸುಮಾರು ಅರ್ಧ ತಾಸು ಸುರಿದ ಮಳೆಗೆ ಇಲ್ಲಿನ ಜನತೆ ತತ್ತರಿಸಿದರು. ಆರಂಭದಲ್ಲಿ ಗಾಳಿ ಇಲ್ಲದೆ ಮಳೆ ಜೋರಾಗಿ ಸುರಿಯಿತು. ಮೋರಿಗಳಲ್ಲಿ ನೀರು ಹರಿಯಲಾಗದೆ ರಸ್ತೆಯಲ್ಲಿ ಹರಿಯಿತು. ಆಟೋ, ದ್ವಿಚಕ್ರ ವಾಹನ ಸವಾರರು ಬೀಸಿದ ಬಿರುಗಾಳಿ, ಮಳೆಗೆ ಮುಂದೆ ಚಲಿಸಲಾಗದೆ ಪರಿತಪಿಸಿದರು. ಹಲವು ಅಂಗಡಿ ಮುಂಗಟ್ಟುಗಳ ಬೋರ್ಡು ಗಾಳಿ ರಭಸಕ್ಕೆ ಕಿತ್ತು ತೂರಾಡಿದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ.